ADVERTISEMENT

ಊರಿಗೊಂದೇ ಸ್ಮಶಾನ ಇರಲಿ: ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 21:31 IST
Last Updated 4 ಏಪ್ರಿಲ್ 2021, 21:31 IST
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಹಾಗೂ ಎಸ್‌ಪಿ ರವಿ ಚನ್ನಣ್ಣನವರ ಅವರು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಹಾಗೂ ಎಸ್‌ಪಿ ರವಿ ಚನ್ನಣ್ಣನವರ ಅವರು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು   

ದಾಬಸ್ ಪೇಟೆ: ‘ಜಾತಿವಾರು ಸ್ಮಶಾನ ನಿರ್ಮಿಸುವ ಬದಲು, ಊರಿಗೊಂದೇ ಇರಲಿ. ಸಾವಿನಲ್ಲಿ ಭೇದ ಮಾಡುವುದು ಬೇಡ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಹೇಳಿದರು.

ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯ ದೇವರಹೊಸಹಳ್ಳಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ್ದ ಅವರಿಗೆ, ಎಸ್‌ಸಿ ಸಮುದಾಯಕ್ಕಾಗಿ ಒಂದು ಸ್ಮಶಾನ ನಿರ್ಮಿಸಲು ಜಾಗ ಗುರುತಿಸಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದಾಗ, ಈ ರೀತಿ ಪ್ರತಿಕ್ರಿಯಿಸಿದರು.

ಶ್ರೀನಿವಾಸ್‌ ಅವರೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ ಗ್ರಾಮಸ್ಥರ ಕುಂದು–ಕೊರತೆ ಆಲಿಸಿದರು.

ADVERTISEMENT

ಇದೇ ವೇಳೆ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಹಾಗೂ ಇತರ ಸೌಲಭ್ಯಗಳನ್ನು ವಿತರಿಸಲಾಯಿತು.
ಉಪ ತಹಶೀಲ್ದಾರ‍್ ಕುಮಾರಸ್ವಾಮಿ, ಕಂದಾಯ ಅಧಿಕಾರಿ ಪಂಚಾಕ್ಷರಿ, ಗ್ರಾಮ ಲೆಕ್ಕಿಗ ರೋಹಿತ್ ಹಾಗೂ ಬಾಲಕೃಷ್ಣ ಇದ್ದರು.

ನೆಲಮಂಗಲ ತಹಶೀಲ್ದಾರ್‌ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.