ADVERTISEMENT

ಸೋಂಪುರ: ಪಂಚಾಯಿತಿ ಚುನಾವಣೆಗೆ ಸಜ್ಜು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 20:56 IST
Last Updated 14 ಡಿಸೆಂಬರ್ 2020, 20:56 IST

ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿಯ ಆರು ಗ್ರಾಮ ಪಂಚಾಯಿತಿಗಳ ಒಟ್ಟು 105 ಕ್ಷೇತ್ರಗಳಲ್ಲಿ ಚುನಾವಣಾ ಅಖಾಡ ಸಿದ್ದಗೊಂಡಿವೆ. ಕಣದಲ್ಲಿರುವ ಅಭ್ಯರ್ಥಿಗಳಿಗೆಸೋಮವಾರದಂದು ಚಿಹ್ನೆಗಳನ್ನು ನೀಡಲಾಗಿದ್ದು, ಅಧಿಕೃತವಾಗಿ ಪ್ರಚಾರಕ್ಕೆ ಚಾಲನೆ ಸಿಕ್ಕಿದೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಡಿ.11ಕ್ಕೆ ಕೊನೆಗೊಂಡಿತ್ತು. ನಾಮಪತ್ರ ವಾಪಸ್‌ ಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು.

ನರಸೀಪುರ ಪಂಚಾಯಿತಿಯ 16. ಹೊನ್ನೇನಹಳ್ಳಿಯ 14, ಆಗಲಕುಪ್ಪೆಯ 19, ಶಿವಗಂಗೆ 17, ಸೋಂಪುರ 25 ಹಾಗೂ ಮರಳಕುಂಟೆ ಪಂಚಾಯಿತಿಯ 14 ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಡಿ.22ರಂದು ಚುನಾವಣೆ ನಡೆಯಲಿದೆ.

ADVERTISEMENT

ನರಸೀಪುರ ಹೊರತುಪಡಿಸಿ ಉಳಿದ ಐದೂ ಪಂಚಾಯಿತಿಗಳ ಕೆಲವು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ.ಚುನಾವಣೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಪತಿ, ಹಾಲಿ ಸೋಂಪುರ ಜಿಲ್ಲಾಪಂಚಾಯಿತಿ ಸದಸ್ಯರ ಅಳಿಯ, ಗ್ರಾಮಾಂತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೀಗೆ ಪ್ರತಿಷ್ಠಿತರು ಕಣದಲ್ಲಿದ್ದು, ಕುತೂಹಲ ಮೂಡಿಸಿದೆ.

ಈಗಾಗಲೇ ರಾಜಕೀಯ ಪಕ್ಷಗಳ ಮುಖಂಡರು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಪ್ರಯತ್ನದಲ್ಲಿದ್ದಾರೆ. ಹೋಬಳಿಯಲ್ಲಿ ಬಿಜೆಪಿ ನಾಯಕರು ಚುನಾವಣೆ ಎದುರಿಸಲು ಮೊದಲೇ ಸಿದ್ದತೆ ಮಾಡಿಕೊಂಡಿದ್ದರು. ಜೆಡಿಎಸ್ ಶಾಸಕರು ಸಹ ಸಭೆ ನಡೆಸಿ ತಂತ್ರ ಎಣೆದಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ನಾಯಕರು ಮಾತ್ರ ಇದರಲ್ಲಿ ಹಿಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.