ADVERTISEMENT

ಹೊನ್ನೇನಹಳ್ಳಿ; ಗ್ರಾಮಸಭೆಗೆ ಗೈರು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 20:54 IST
Last Updated 20 ಡಿಸೆಂಬರ್ 2018, 20:54 IST

ದಾಬಸ್‌ಪೇಟೆ: ಗೈರಾಗಿದ್ದ ಬಹುತೇಕ ಅಧಿಕಾರಿಗಳು, ಬೆರಳೆಣಿಕೆಯಷ್ಟಿದ್ದ ಸಾರ್ವಜನಿಕರು, ಸಭೆಯ ತುಂಬಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಾಲಾ ಮಕ್ಕಳು, ಗ್ರಾಮಸಭೆಯನ್ನು ಮುಂದೂಡಬೇಕೆನ್ನುವ ಆಕ್ರೋಶ...ಇದೆಲ್ಲಾ ಕಂಡು ಬಂದದ್ದು ಹೊನ್ನೇನಹಳ್ಳಿ ಪಂಚಾಯಿತಿಯ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ.

26 ಇಲಾಖೆಗಳ ಪೈಕಿ ಎಂಟು ಇಲಾಖೆಯ ಅಧಿಕಾರಿಗಳಷ್ಟೇ ಹಾಜರಾಗಿದ್ದರು. ಆಗ ಕೆಲವರು ಸಭೆ ಮುಂದೂಡಿ ಎಂದು ಆಗ್ರಹಿಸಿದರು. ಜಿ.ಪಂ. ಸದಸ್ಯ ನಂಜುಂಡಯ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಎಲ್ಲಾ ಇಲಾಖೆಗಳಿಗೆ ಮಾಹಿತಿ ನೀಡಿ ಸಭೆಗೆ ಆಹ್ವಾನಿಸಿದ್ದೇವೆ ಎಂಬ ಉತ್ತರ ನೀಡಿದರು ಪಿಡಿಒ ಮಂಜುನಾಥ್. ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿ.ಪಂ ಸದಸ್ಯರು ಹೇಳಿದರು.

ನೆಲಮಂಗಲ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಶೀಲಮ್ಮ ನೋಡಲ್ ಅಧಿಕಾರಿಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.