ADVERTISEMENT

ಕೆಂಗೇರಿಯಲ್ಲಿ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 18:14 IST
Last Updated 19 ಏಪ್ರಿಲ್ 2024, 18:14 IST
<div class="paragraphs"><p>ಕೆಂಗೇರಿ, ಯಲಹಂಕ ಸೇರಿದಂತೆ ವಿವಿಧೆಡೆ ಶುಕ್ರ ವಾರ ಸಂಜೆ ಸಾಧಾರಣ ಮಳೆಯಾಗಿದೆ.</p></div>

ಕೆಂಗೇರಿ, ಯಲಹಂಕ ಸೇರಿದಂತೆ ವಿವಿಧೆಡೆ ಶುಕ್ರ ವಾರ ಸಂಜೆ ಸಾಧಾರಣ ಮಳೆಯಾಗಿದೆ.

   

ಬೆಂಗಳೂರು: ನಗರದ ಕೆಂಗೇರಿ, ಯಲಹಂಕ ಸೇರಿದಂತೆ ವಿವಿಧೆಡೆ ಶುಕ್ರ ವಾರ ಸಂಜೆ ಸಾಧಾರಣ ಮಳೆಯಾಗಿದೆ.

ಕೆಂಗೇರಿಯ ಕೊಮ್ಮಘಟ್ಟ ವ್ಯಾಪ್ತಿ ಯಲ್ಲಿ ಹಾಗೂ ಯಲಹಂಕ ಸಮೀಪದ ಹುಣಸಮಾರನಹಳ್ಳಿ ಸುತ್ತ ಸಾಧಾರಣ ಮಳೆಯಾಗಿದೆ.

ADVERTISEMENT

ದಾಬಸ್ ಪೇಟೆ ವರದಿ: ಸೋಂಪುರ ಹೋಬಳಿಯಾದ್ಯಂತ ಶುಕ್ರವಾರ ಸಂಜೆ ಸಾಧಾರಣ ಮಳೆಯಾಗಿದೆ. ಸಂಜೆ 4.20ಕ್ಕೆ ಆರಂಭವಾದ ಮಳೆ 5 ಗಂಟೆವರೆಗೆ ಬಂದಿದೆ. ಮಳೆಗಿಂತ ಗಾಳಿ ಹೆಚ್ಚಾಗಿತ್ತು.

ಐದು ತಿಂಗಳಿನಿಂದ ಮಳೆ ಬಂದಿರ ಲಿಲ್ಲ. ಜನರು ಬಿಸಿಲ ಬೇಗೆಗೆ ಬಸವಳಿದಿ ದ್ದರು. ಗಿಡ–ಮರ ಬಾಡುತ್ತಿದ್ದವು. ಕೆರೆಗಳು ನೀರಿಲ್ಲದೆ ಬತ್ತಿದ್ದವು. ಈಗ ಬಂದಿರುವ ಮಳೆ ತುಸು ಸಮಾಧಾನ ತರಿಸಿದೆ ಎಂದು ರೈತ ರಾಜಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.