ADVERTISEMENT

ಅಕಾಲಿಕ ಮಳೆ: ಹಾಳಾಯ್ತು ಮಾವು, ಹುಣಸೆ ಬೆಳೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 20:57 IST
Last Updated 20 ಫೆಬ್ರುವರಿ 2021, 20:57 IST
ಮಳೆಯಿಂದ ಹೂವು ಉದುರಿರುವ ಮಾವಿನ ಮರಗಳು
ಮಳೆಯಿಂದ ಹೂವು ಉದುರಿರುವ ಮಾವಿನ ಮರಗಳು   

ದಾಬಸ್ ಪೇಟೆ: ಸೋಂಪುರ ಹೋಬಳಿಯುದ್ದಕ್ಕೂ ಮೂರು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಮಾವು, ಹುಣಸೆ, ಶೀಗೆ, ಫಸಲುಗಳು ಹಾಳಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಗುರುವಾರ ರಾತ್ರಿ ಮಳೆ ಪ್ರಮಾಣ ಕಡಿಮೆ ಇತ್ತು. ಶುಕ್ರವಾರ ಸಂಜೆ 8 ಗಂಟೆಗೆ ಆರಂಭವಾದ ಮಳೆ ರಾತ್ರಿಯೆಲ್ಲಾ ಗುಡುಗು ಮಿಂಚು ಸಮೇತ ಎಡಬಿಡದೆ ಸುರಿಯಿತು. ಅದರ ಜೊತೆಗೆ ಆಲಿಕಲ್ಲುಗಳೂ ಬಿದ್ದವು.

‘ಮಳೆ ಹಾಗೂ ಆಲಿಕಲ್ಲಿನಿಂದ ಮಾವಿನ ಹೂ ಮತ್ತು ಪೀಚು, ಹುಣಸೆ ಹಣ್ಣುಗಳು ನೆಲಕ್ಕುರುಳಿವೆ. ಇದರಿಂದ ರೈತರ ಆದಾಯಕ್ಕೆ ಖೋತಾ ಆಗಿದೆ. ಒಕ್ಕಣೆ ಮಾಡಿದ ರಾಗಿ ಹುಲ್ಲಿನ ಮೆದೆಗಳು ನೀರು ತೆಗೆದುಕೊಂಡು ಕೊಳೆತು ಹೋಗುವ ಭಯ ಮೂಡಿದೆ’ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ರಾಗಿ, ಭತ್ತ, ತೊಗರಿ, ಹುರುಳಿ, ಇನ್ನಿತರ ಬೆಳೆಗಳನ್ನು ಕೊಯ್ಲು ಮಾಡುವಾಗ, ಕೂಡಿಡುವಾಗ ಮತ್ತು ಒಕ್ಕಣಿ ಮಾಡುವಾಗ ಅಕಾಲಿಕ ಮಳೆ ಬಂದು ಫಸಲು ಹಾಳಾಗಿತ್ತು. ಹುಲ್ಲು, ರಾಗಿ ಕಪ್ಪಾದವು. ಇದೀಗ ಮತ್ತೆ ಮಳೆ ಬಂದು, ಆದಾಯದ ಮೂಲಗಳಾದ ಹುಣಸೆ, ಮಾವು ಶೀಗೆಕಾಯಿ ಬೆಳೆಗಳು ಹಾಳಾಗಿವೆ’ ಎಂದು ರೈತ ತಿಮ್ಮಣ್ಣ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.