ADVERTISEMENT

‘ಬೋಧನಾ ವೃತ್ತಿ ಪ್ರಸ್ತುತ ಸವಾಲಿನ ಕೆಲಸ: ಕರಜಗಿ

ಶಿಕ್ಷಣ ತಜ್ಞರ ಸಮ್ಮೇಳನದಲ್ಲಿ ಡಾ.ಗುರುರಾಜ ಕರಜಗಿ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಮೇ 2019, 20:01 IST
Last Updated 11 ಮೇ 2019, 20:01 IST
ಡಾ.ಗುರುರಾಜ ಕರಜಗಿ ಮಾತನಾಡಿದರು. (ಎಡದಿಂದ) ದಯಾನಂದ ಸಾಗರ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆರ್‌.ಜನಾರ್ದನ್‌, ಎಚ್‌.ಎಸ್‌.ನಾಗರಾಜ, ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಯಜ್ಞಮೂರ್ತಿ ಶ್ರೀಕಾಂತ್, ದಯಾನಂದ ಸಾಗರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಾಲಿಸ್ವಾಮಿ, ದಯಾನಂದ ಸಾಗರ ವಿಶ್ವವಿದ್ಯಾಲಯದ ಕುಲಪತಿ ಎ.ಎನ್‌.ಎನ್‌.ಮೂರ್ತಿ ಇದ್ದರು.

ಬೆಂಗಳೂರು: ‘ಏಕಾಗ್ರತೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳನ್ನುಹಿಡಿದಿಟ್ಟುಕೊಂಡು ಪಾಠ ಮಾಡುವುದು ಸವಾಲಿನ ಕೆಲಸ’ ಎಂದುಶಿಕ್ಷಣತಜ್ಞ ಡಾ.ಗುರುರಾಜ ಕರಜಗಿ ಅಭಿಪ್ರಾಯಪಟ್ಟರು.

ದಯಾನಂದ ಸಾಗರ ವಿಶ್ವವಿದ್ಯಾಲಯವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಣ ತಜ್ಞರ ಸಮ್ಮೇಳನದಲ್ಲಿಅವರು ಮಾತನಾಡಿದರು.

‘1996ರಲ್ಲಿ ಮಕ್ಕಳು ಶಾಲಾ ಕೊಠಡಿಯಲ್ಲಿ 45 ನಿಮಿಷ ಏಕಾಗ್ರತೆಯಿಂದ ಕುಳಿತು ಪಾಠ ಕೇಳುತ್ತಿದ್ದರು. 2017ರಲ್ಲಿ ಅದು 6 ನಿಮಿಷಕ್ಕೆ ಕಡಿಮೆಯಾಗಿದೆ. ಈ ಹಿಂದೆಶಿಕ್ಷಕರು ಮಕ್ಕಳಿಗೆ ನಿಘಂಟು ತರುವಂತೆ ಹೇಳುತ್ತಿದ್ದರು. ಆದರೆ, ಈಗ ಕಲಿಕೆಯು ವೇಗ ಪಡೆದುಕೊಂಡಿದ್ದು, ಮಕ್ಕಳು ಗೂಗಲ್‌ನಲ್ಲಿ ಶಬ್ದದ ಅರ್ಥವನ್ನು ಹುಡುಕುತ್ತಿದ್ದಾರೆ’ ಎಂದರು.

ADVERTISEMENT

‘ಅಜ್ಜಿ ಜಗತ್ತಿನಮೊದಲ ಕ್ರಿಯಾಶೀಲ ಶಿಕ್ಷಕಿ. ಆಕೆ ಕಥೆ ಹೇಳುವ ಶೈಲಿಯಲ್ಲಿಯೇ ಪಾಠ ಮಾಡುವ ಮೂಲಕ ಮಕ್ಕಳನ್ನು ಹಿಡಿದಿಟ್ಟುಕೊಳ್ಳಬೇಕು. ಶಿಕ್ಷಕರು ಮಕ್ಕಳ ಕಲಿಕಾ ವಿಧಾನವನ್ನು ಗಮನಿಸಬೇಕು. ಅದರಂತೆ ಪಾಠ ಮಾಡಬೇಕು’ ಎಂದು ಹೇಳಿದರು.

ಬೇಸ್ ಸಂಸ್ಥಾಪಕ ನಿರ್ದೇಶಕ ಡಾ.ಎಚ್.ಎಸ್.ನಾಗರಾಜ, ‘40 ವರ್ಷಗಳಿಂದ ಈಚೆಗೆ ಶೈಕ್ಷಣಿಕ ವಾತಾವರಣ ಬದಲಾಗಿದೆ. ಕಡಿಮೆ ಗುಣಮಟ್ಟದ ಕಲಿಕಾ ಮಾದರಿಗಳು ಮಕ್ಕಳನ್ನು ಕಿಟಕಿಯಿಂದ ಆಚೆ ನೋಡುವಂತೆ ಮಾಡಿವೆ’ ಎಂದರು.

‘ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಯ ಕುರಿತು ವಿಶೇಷ ಕಾಳಜಿ ವಹಿಸಬೇಕು. ವಿದ್ಯಾರ್ಥಿಯ ಹಿಂದುಳಿಯುವಿಕೆಗೆ ಕಾರಣ ಏನು ಎಂಬ ಕುರಿತು ಯೋಚಿಸಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.