ADVERTISEMENT

ಪತ್ರಕರ್ತ ಮೈಕಲ್ ರಾಬರ್ಟ್ ಪತ್ರಾವೊ ನಿಧನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 19:57 IST
Last Updated 25 ನವೆಂಬರ್ 2025, 19:57 IST
ಮೈಕಲ್ ರಾಬರ್ಟ್ ಪತ್ರಾವೊ
ಮೈಕಲ್ ರಾಬರ್ಟ್ ಪತ್ರಾವೊ   

ಬೆಂಗಳೂರು: ‘ಡೆಕ್ಕನ್ ಹೆರಾಲ್ಡ್‌’ನಲ್ಲಿ ಮೂರು ದಶಕಗಳಿಗೂ ಹೆಚ್ಚು ಅವಧಿಯಿಂದ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತ ಮೈಕಲ್ ರಾಬರ್ಟ್ ಪತ್ರಾವೊ (66) ಮಂಗಳವಾರ ನಿಧನರಾದರು. 

ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಅವರ ಅಂತ್ಯಕ್ರಿಯೆ ಮಂಗಳೂರಿನಲ್ಲಿ ಬುಧವಾರ ನಡೆಯಲಿದೆ.

1959ರಂದು ಮಂಗಳೂರಿನಲ್ಲಿ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದ ಅವರು, ಅಲ್ಲಿಯ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ‌ಬಿ.ಕಾಂ ಪದವಿ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ADVERTISEMENT

ಆರಂಭಿಕ ದಿನಗಳಲ್ಲಿ ಜಾಹೀರಾತು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅವರು, 1992ರಲ್ಲಿ ಡೆಕ್ಕನ್ ಹೆರಾಲ್ಡ್‌ಗೆ ಸೇರಿದರು. 2017ರಲ್ಲಿ ನಿವೃತ್ತರಾಗಿದ್ದ ಅವರು, ಪತ್ರಿಕೆಯ ವಿದ್ಯಾರ್ಥಿ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.