ಉಡುಪಿ: ಸ್ನೇಹಿತನ ಮದುವೆಗೆ ಬೆಂಗಳೂರಿನಿಂದ ಬಂದಿದ್ದ ಸಾಮ್ರಾಟ್ ಮಂಜುಂದಾರ್ ಎಂಬಾತ ಮಲ್ಪೆ ಬೀಚ್‌ನಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಜಾಲಹಳ್ಳಿಯ ನಿವಾಸಿ ಸಾಮ್ರಾಟ್ ಮಜುಂದಾರ್ ಸೋಮವಾರ ರಾತ್ರಿ ಸ್ನೇಹಿತರೊಂದಿಗೆ ಬಂದು ಮಲ್ಪೆಯಬ್ಲೂ ವೇವ್ಸ್ ಹೋಟೆಲ್‌ನಲ್ಲಿ ತಂಗಿದ್ದರು. ಮಂಗಳವಾರ ಬೆಳಿಗ್ಗೆ ಸ್ನೇಹಿತರೊಂದಿಗೆ ಈಜಾಡುವಾಗ ನೀರಿನ ಸೆಳೆತಕ್ಕೆ ಸಿಲುಕಿ
ದ್ದಾರೆ. ಸಾಮ್ರಾಟ್ ಜತೆ ಸ್ನೇಹಿತ ಬಿನು ಮೋಹನ್ ನೀರಿನಲ್ಲಿ ಕೂಡ ಮುಳು
ಗಿದ್ದಾರೆ. ಮಲ್ಪೆಯ ಲೈಫ್‌ಗಾರ್ಡ್ ಚಂದ್ರು ಕೂಡಲೇ ನೆರವಿಗೆ ಧಾವಿಸಿ ಬಿನು ಮೋಹನ್ ಅವರನ್ನು ಪ್ರಾಣಾಪಾ
ಯದಿಂದ ಪಾರು ಮಾಡಿದ್ದಾರೆ. ಆದರೆ ಸಾಮ್ರಾಟ್ ನೀರಿನಲ್ಲಿ ಮುಳುಗಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಸಾಮ್ರಾಟ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.