ADVERTISEMENT

ಪದವಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 19:05 IST
Last Updated 12 ಜೂನ್ 2019, 19:05 IST
ತರಬೇತಿ ಅವಧಿಯಲ್ಲಿ ಉತ್ತಮ ಪ್ರದರ್ಶನ ತೋರಿ, ವಾಯುಸೇನಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ರಶ್ಮಿಕುಮಾರಿ ಅವರಿಗೆ ಏರ್ ಕಮಾಂಡರ್ ರಾಹುತ್ ಶೀತಲ್ ಬಹುಮಾನ ವಿತರಿಸಿದರು.
ತರಬೇತಿ ಅವಧಿಯಲ್ಲಿ ಉತ್ತಮ ಪ್ರದರ್ಶನ ತೋರಿ, ವಾಯುಸೇನಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ರಶ್ಮಿಕುಮಾರಿ ಅವರಿಗೆ ಏರ್ ಕಮಾಂಡರ್ ರಾಹುತ್ ಶೀತಲ್ ಬಹುಮಾನ ವಿತರಿಸಿದರು.   

ಯಲಹಂಕ: ಇಲ್ಲಿನ ವಾಯುಪಡೆ ಕೇಂದ್ರದಲ್ಲಿ 202ನೇ ಪೈಲಟ್ ಕೋರ್ಸ್‌ ಹಾಗೂ 55ನೇ ಎ.ಎನ್-32 ಜಲಸಂಚಾರ ಪರಿವರ್ತನಾ ಕೋರ್ಸ್‌ ಪೂರ್ಣಗೊಳಿಸಿದ 24 ಅಧಿಕಾರಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಈ ವೇಳೆ ಮಾತನಾಡಿದ ವಾಯುಪಡೆಯ ಏರ್ ಕಮಾಂಡರ್ ರಾಹುತ್ ಶೀತಲ್, ‘ಯುವಪದವೀಧರ ಅಧಿಕಾರಿಗಳ ಹೆಗಲಿಗೆ ಶೀಘ್ರದಲ್ಲೇ ದೊಡ್ಡ ಜವಾಬ್ದಾರಿ ಬೀಳಲಿದೆ. ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ಕಾರ್ಯಾಚರಣೆನಡೆಸಬೇಕಾಗುತ್ತದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿನಿರ್ವಹಿಸಬೇಕು’ ಎಂದು ತಿಳಿಸಿದರು.

ನಿಶ್ಚಿತ ವಿಂಗ್ ತರಬೇತಿ ಸಿಬ್ಬಂದಿ ಬಳಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲು ಅಗತ್ಯತರಬೇತಿ ದೊರೆಯಲಿದ್ದು, ವಾಯುಪಡೆಯ ನೀತಿ-ನಿಯಮಗಳನ್ನು ಅನುಸರಿಸಬೇಕು. ಯುವಪದವೀಧರರು ಸಮಗ್ರತೆ, ಏಕತೆ ಮತ್ತು ಹೊಣೆಗಾರಿಕೆಗಾಗಿ ಯಾವುದೇ ಸವಾಲುಗಳಿಗೆ ಸಿದ್ಧರಾಗಿರಬೇಕು ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.