ಬೆಂಗಳೂರು: ಆನ್‌ಲೈನ್‌ನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರು ಡಿಜಿಲಾಕರ್ ಆ್ಯಪ್ ಮೂಲಕ ಹಾಜರುಪಡಿಸುವ ಗುರುತಿನ ಚೀಟಿಗಳನ್ನು ಮಾನ್ಯ ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಪ್ರಯಾಣದ ಸಮಯದಲ್ಲಿ ಆಧಾರ್, ಪ್ಯಾನ್‍ಕಾರ್ಡ್ ಹಾಗೂ ಚಾಲನಾ ಪರವಾನಗಿ ಗುರುತಿನ ಚೀಟಿಯನ್ನು ಈ ಆ್ಯಪ್‌ನಲ್ಲಿ ತೋರಿಸಬಹುದು ಎಂದು ಹೇಳಿದೆ.
ಹಿರಿಯ ನಾಗರಿಕರು ಟಿಕೆಟ್ ದರದಲ್ಲಿ ರಿಯಾಯಿತಿ ಪಡೆಯಲು ಡಿಜಿಲಾಕರ್‌ನಲ್ಲಿರುವ ಆಧಾರ್ ಅಥವಾ ಚಾಲನಾ ಪರವಾನಗಿ ತೋರಿಸಬಹುದು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.