ADVERTISEMENT

ಬೆಂಗಳೂರಿನಲ್ಲಿ ದಿಂಡಿಗಲ್ ತಲಪ್ಪಾಕಟ್ಟಿ ಬಿರಿಯಾನಿ ಮಳಿಗೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 16:54 IST
Last Updated 3 ಏಪ್ರಿಲ್ 2021, 16:54 IST

ಬೆಂಗಳೂರು: ತಮಿಳುನಾಡಿನ ಹೆಸರಾಂತ ದಿಂಡಿಗಲ್ ತಲಪ್ಪಾಕಟ್ಟಿ ಬಿರಿಯಾನಿ ಮಳಿಗೆ ಈಗ ಬೆಂಗಳೂರಿನ ಉತ್ತರಹಳ್ಳಿಗೂ ವಿಸ್ತರಿಸಿದೆ.

7 ದೇಶಗಳಲ್ಲಿ 80ಕ್ಕೂ ಹೆಚ್ಚು ಮಳಿಗೆ ಹೊಂದಿರುವ ದಿಂಡಿಗಲ್ ತಲಪ್ಪಾಕಟ್ಟಿಯ ಮುಖ್ಯ ವ್ಯವಹಾರ ಅಧಿಕಾರ ಅರವಿಂದ ಅಯ್ಯರ್, ‘ವಿಶಿಷ್ಟ ಗುಣಮಟ್ಟದ ಆಹಾರ ಪೂರೈಸುವ ದಿಂಡಿಗಲ್ ತಲಪ್ಪಾಕಟ್ಟಿ 60 ವರ್ಷಗಳ ಪರಂಪರೆ ಹೊಂದಿದೆ. ಗುಣಮಟ್ಟ ಮತ್ತು ರುಚಿಗೆ ನಮ್ಮ ಮೊದಲ ಆದ್ಯತೆಯಾಗಿವೆ. ಉನ್ನತ ಗುಣಮಟ್ಟದ ಸೀರಾಗಾ ಸಾಂಬಾ ಅಕ್ಕಿ, ಸಾಂಪ್ರದಾಯಿಕ ಮಸಾಲೆಗಳ ವಿಶೇಷ ಸಂಯೋಜನೆ, ಕೈಗಳಲ್ಲಿ ಅರೆಯಲಾದ ಮಸಾಲೆಗಳು ಮತ್ತು ವಿಭಿನ್ನ ರೀತಿಯ ಅಡುಗೆ ಶೈಲಿಯು ನಮ್ಮ ಬಿರಿಯಾನಿಯ ವಿಶೇಷ’ ಎಂದರು.

‘ಎಷ್ಟು ಸಾಧ್ಯವೋ ಅಷ್ಟು ಗ್ರಾಹಕರನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ. ಅವರಿಗೆ ಮಹತ್ತರ ಹಾಗೂ ವಿಶಿಷ್ಟ ದಕ್ಷಿಣದ ಭಾರತೀಯ ಡೈನಿಂಗ್ ಅನುಭವ ಒದಗಿಸುತ್ತಿದ್ದೇವೆ’ ಎಂದು ಹೇಳಿದರು.

ADVERTISEMENT

‘ತಲಪ್ಪಾಕಟ್ಟಿ ಮಟನ್ ಬಿರಿಯಾನಿ, ತಲಪ್ಪಾಕಟ್ಟಿ ಗನ್ ಫೈರ್ ಚಿಕನ್, ತಲಪ್ಪಾಕಟ್ಟಿ ಚಿಕನ್ ಬಿರಿಯಾನಿ ಪ್ರಮುಖ ತಿನಿಸಿಸುಗಳನ್ನು ನಮ್ಮ ರೆಸ್ಟೋರೆಂಟ್‌ ಒಳಗೊಂಡಿವೆ. 1957ರಲ್ಲಿ ದಿಂಡಿಗಲ್‍ನಲ್ಲಿ ನಾಗಸ್ವಾಮಿ ನಾಯ್ಡು ಅವರಿಂದ ಪ್ರಾರಂಭವಾದ ಆನಂದ ವಿಲಾಸ್ ಬಿರಿಯಾನಿ ಹೋಟೆಲ್ ಈಗ ದಿಂಡಿಗಲ್ ತಲಪ್ಪಾಕಟ್ಟಿ ಬಿರಿಯಾನಿ ಹೋಟೆಲ್ ಆಗಿ ಖ್ಯಾತಿ ಪಡೆದಿದೆ. ಉತ್ತರಹಳ್ಳಿಯಲ್ಲಿ ಶಾಖೆ ತೆರೆಯುವ ಮೂಲಕ ಬೆಂಗಳೂರಿನ ಜನರಿಗೆ ಸೇವೆ ಒದಗಿಸಲು ಸಿದ್ಧವಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.