ADVERTISEMENT

ಕಾರ್ಮಿಕರಿಗೆ ಸೊಂಕು ನಿವಾರಕ ಸಿಂಪರಣೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 21:46 IST
Last Updated 23 ಮಾರ್ಚ್ 2020, 21:46 IST
ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಪೀಣ್ಯ ಕೈಗಾರಿಕಾ ಪ್ರದೇಶದ ಆದಿತ್ಯ ಆಟೊ ಪ್ರಾಡಕ್ಟ್ಸ್ ಕಂಪನಿಯಲ್ಲಿ ಉದ್ಯೋಗಿಗಳು ಒಳ ಬರುವಾಗಲೇ ಇಡೀ ದೇಹಕ್ಕೆ ಸೋಂಕು ನಿವಾರಕ (ಸ್ಯಾನಿಟೈಸರ್) ಮತ್ತು ಆಲ್ಕೋಹಾಲ್‌ಭರಿತ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ -ಪ್ರಜಾವಾಣಿ ಚಿತ್ರ/ ಎಂ.ಎಸ್. ಮಂಜುನಾಥ್
ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಪೀಣ್ಯ ಕೈಗಾರಿಕಾ ಪ್ರದೇಶದ ಆದಿತ್ಯ ಆಟೊ ಪ್ರಾಡಕ್ಟ್ಸ್ ಕಂಪನಿಯಲ್ಲಿ ಉದ್ಯೋಗಿಗಳು ಒಳ ಬರುವಾಗಲೇ ಇಡೀ ದೇಹಕ್ಕೆ ಸೋಂಕು ನಿವಾರಕ (ಸ್ಯಾನಿಟೈಸರ್) ಮತ್ತು ಆಲ್ಕೋಹಾಲ್‌ಭರಿತ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ -ಪ್ರಜಾವಾಣಿ ಚಿತ್ರ/ ಎಂ.ಎಸ್. ಮಂಜುನಾಥ್   

ಬೆಂಗಳೂರು: ಕೊರೊನಾ ಸೋಂಕು ಕಾರ್ಮಿಕರಿಗೆ ಹರಡದಂತೆ ಕೈಗಳಿಗೆ ಸೋಂಕು ನಿವಾರಕ ದ್ರಾವಣದಿಂದ ಕೈತೊಳೆಯಿಸಿ, ಥರ್ಮಲ್ ಸ್ಕ್ಯಾನ್ ಮೂಲಕ ತಪಾಸಣೆ ನಡೆಸಿ ಕಾರ್ಖಾನೆಯ ಒಳಕ್ಕೆ ಬಿಡುವುದನ್ನು ನೋಡಿದ್ದೇವೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ಆದಿತ್ಯ ಆಟೊ ಪ್ರಾಡಕ್ಟ್ಸ್‌ ಕಂಪನಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಕಾರ್ಮಿಕರ ಇಡೀ ದೇಹಕ್ಕೆ‌ಸೋಂಕು ನಿವಾರಕ (ಸ್ಯಾನಿಟೈಸರ್) ಮತ್ತು ಆಲ್ಕೋಹಾಲ್‌ಭರಿತ ದ್ರಾವಣ ಸಿಂಪಡಣೆ ಮಾಡುತ್ತಿದೆ.

ಕಂಪನಿಯಲ್ಲಿ 500 ಕಾರ್ಮಿಕರಿದ್ದು, ಒಳಕ್ಕೆ ಬರುವ ಮುನ್ನ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ನಡೆಸಲಾಗುತ್ತದೆ. ದೇಹದಲ್ಲಿ 99 ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಕಡಿಮೆ ಉಷ್ಣಾಂಶ ಇದ್ದರೆ ಮಾತ್ರ ಒಳಕ್ಕೆ ಬಿಡಲಾಗುತ್ತದೆ. ಅದಕ್ಕೂ ಮುನ್ನ ಇಡೀ ದೇಹಕ್ಕೆ ಸಿಂಪಡಣೆ ಮಾಡಲಾಗುತ್ತಿದೆ. ಕಂಪನಿಗೆ ಭೇಟಿ ನೀಡುವ ಸಂದರ್ಶಕರಿಗೂ ಇದೇ ಮಾದರಿ ಅನುಸರಿಸಲಾಗುತ್ತಿದೆ.

‘ಆದಿತ್ಯ ಕಂಪನಿ ದೊಡ್ಡಬಳ್ಳಾ‍ಪುರದಲ್ಲಿ ಮುಖ್ಯ ಶಾಖೆ ಹೊಂದಿದ್ದು, ಬೊಮ್ಮಸಂದ್ರ, ಪುಣೆ, ತಮಿಳುನಾಡು ಮತ್ತು ಹಿರಿಯಾಣದಲ್ಲೂ ಶಾಖೆಗಳನ್ನು ಹೊಂದಿದೆ. ಎಲ್ಲಾ ಕಡೆಗಳಲ್ಲೂ ಇದೇ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ’ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ರಮೇಶ್ ಪೈ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.