ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್) ಸಕ್ಕರೆ ರಹಿತ ನಂದಿನಿ ಸಿಹಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.
500 ಗ್ರಾಂ ನಂದಿನಿ ಖೋವಾ ಗುಲಾಬ್ ಜಾಮೂನ್ (₹220), 200 ಗ್ರಾಂನ ನಂದಿನಿ ಹಾಲಿನ ಪೇಡಾ (₹170), ನಂದಿನಿ ಬೆಲ್ಲದ ಓಟ್ಸ್ ಆ್ಯಂಡ್ ನಟ್ಸ್ ಬರ್ಫಿ(₹170) ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಗ್ರಾಹಕರು ಸಕ್ಕರೆ ರಹಿತ ಸಿಹಿ ತಿನಿಸುಗಳನ್ನು ಬಯಸುತ್ತಾರೆ. ಇವು ಮಧುಮೇಹ ಇರುವವರಿಗೆ ಅನುಕೂಲಕರವಾಗಿದ್ದು, ತೂಕ ನಿಯಂತ್ರಣಕ್ಕೆ ಸಹಕಾರಿ ಹಾಗೂ ಹಲ್ಲುಗಳ ಆರೈಕೆಗೆ ಉತ್ತಮ. ಸಕ್ಕರೆ ಇಲ್ಲದಿದ್ದರೂ ಸಹಜ ಸಿಹಿ ಮತ್ತು ರುಚಿ ಇರುವ ಈ ಉತ್ಪನ್ನಗಳು ಜನಪ್ರಿಯವಾಗುತ್ತಿವೆ ಎಂದು ಮಹಾಮಂಡಳಿ ತಿಳಿಸಿದೆ.
ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ವಿಧಾನಸೌಧದಲ್ಲಿ ಮೂರು ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಕೆಎಂಎಫ್ ಆಡಳಿತಾಧಿಕಾರಿ ಟಿಎಚ್‌ಎಂ ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.