ADVERTISEMENT

ಮಾಫಿಯಾ ಜೊತೆ ಸರ್ಕಾರ ಶಾಮೀಲು: ಡಿ.ಕೆ. ಶಿವಕುಮಾರ್‌ ಆರೋಪ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 19:36 IST
Last Updated 7 ಜೂನ್ 2022, 19:36 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ಬೆಂಗಳೂರು: ‘ರಾಜ್ಯ ಬಿಜೆಪಿ ಸರ್ಕಾರ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಲುಬಿಟ್ಟಿದೆ. ರೈತರಿಗೆ ಕಲಬೆರಕೆ ಗೊಬ್ಬರ ನೀಡಲಾಗುತ್ತಿದೆ.ದೊಡ್ಡ ಮಾಫಿಯಾ ಜೊತೆ ಈ ಸರ್ಕಾರ ಶಾಮೀಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರೈತ ಮುಖಂಡರು ಈ ಸಮಸ್ಯೆಗಳ ಬಗ್ಗೆ ಪಕ್ಷಾತೀತವಾಗಿ ಹೋರಾಡಲು ಸಜ್ಜಾಗಬೇಕು. ರೈತರ ‌ಹೋರಾಟಕ್ಕೆ ಪಕ್ಷ ಕೈ ಜೋಡಿಸಲಿದೆ’ ಎಂದರು.

‘ಬಿತ್ತನೆ ಬೀಜದಿಂದ ರಸಗೊಬ್ಬರವರೆಗೂ ರೈತರಿಗೆ ಪ್ರತಿ ಹಂತದಲ್ಲಿ ಮೋಸ ಮಾಡಲಾಗುತ್ತಿದೆ. ಶೇ 40‌ ಕಮಿಷನ್ ಜೊತೆಗೆ ಶೇ 50 ರಷ್ಟು ಹೆಚ್ಚಿನಬೆಲೆಗೆ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಬೇರೆ ದೇಶಗಳಲ್ಲಿ ಯುದ್ಧ ನಡೆಯುತ್ತಿದೆ ಎಂಬ ನೆಪ ಹೇಳಿ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಮೂಲಕ ವಂಚಿಸಿದ ರೀತಿ ರಸಗೊಬ್ಬರದಲ್ಲೂ ಲೂಟಿ ಮಾಡಲಾಗುತ್ತಿದೆ. ಖಾಸಗಿ, ಬೇರೆ ಸಂಸ್ಥೆಗಳ ಮೂಲಕ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಸರ್ಕಾರ ಮಾರಾಟ ಮಾಡುತ್ತಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.