ADVERTISEMENT

ಚಾಮರಾಜನಗರ ಆಮ್ಲಜನಕ ದುರಂತ ಪ್ರರಕಣ: ಕ್ರಮ ತೆಗೆದುಕೊಳ್ಳದ ಸರ್ಕಾರ –ಡಿಕೆಶಿ ಆರೋಪ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 21:49 IST
Last Updated 1 ಸೆಪ್ಟೆಂಬರ್ 2021, 21:49 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಚಾಮರಾಜನಗರದಲ್ಲಿ ಆಮ್ಲಜನಕ ಸಿಗದೆ 36 ಜನರು ಸಾವಿಗೀಡಾಗಲು ಕಾರಣರಾದ ಯಾವ ಅಧಿಕಾರಿ ವಿರುದ್ಧವೂ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಅಷ್ಟೇ ಅಲ್ಲ, ಅವರನ್ನು ರಾಜಕೀಯ ನಾಯಕರಂತೆ ಬಿಂಬಿಸಿ ಪ್ರಚಾರ ನೀಡುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಿಜೆಪಿ ವಿಭಿನ್ನ ಆಡಳಿತ ನಡೆಸುತ್ತಿದೆ. ಆಮ್ಲಜನಕ ಸಿಗದೆ ಜನರು ಸತ್ತಿರುವುದನ್ನು ಹೈಕೋರ್ಟ್ ಸಮಿತಿ ವರದಿ ಕೊಟ್ಟ ನಂತರ ಒಪ್ಪಿಕೊಂಡ ಸರ್ಕಾರ, ಸತ್ತವರ ಕುಟುಂಬಕ್ಕೆ ₹ 2 ಲಕ್ಷ ಪರಿಹಾರ ಘೋಷಿಸಿತು. ಆದರೆ, ಸಂಸತ್ತಿಗೆ ಮಾತ್ರ ಆಮ್ಲಜನಕ ಸಿಗದೆ ಯಾರೂ ಸತ್ತಿಲ್ಲ ಎಂದು ಮಾಹಿತಿ ನೀಡಿದೆ’ ಎಂದರು.

‘ಪ್ರತಿ ಬಡವನಿಗೆ ಉಚಿತ ಲಸಿಕೆ ನೀಡಲು ಆದ್ಯತೆ ನೀಡುವ ಬದಲು ‘ನೋ ವ್ಯಾಕ್ಸಿನೇಷನ್, ನೋ ರೇಷನ್’ ಎಂದು ಹೇಳಿ, ಅವರಲ್ಲಿ ಆತಂಕ ಮೂಡಿಸಿರುವ ಅಧಿಕಾರಿಯನ್ನು ತಕ್ಷಣ ಕರ್ತವ್ಯದಿಂದ ಅಮಾನತು ಮಾಡಬೇಕು. ಆತನ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಅಡುಗೆ ಅನಿಲ, ಆಟೊ ಗ್ಯಾಸ್, ಪೆಟ್ರೋಲ್, ಡೀಸೆಲ್ ಎಲ್ಲದರ ಬೆಲೆ ಏರುತ್ತಿದೆ. ಇದೇ 5, 6ರಂದು ಪಕ್ಷದ ನಾಯಕರ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ನಮ್ಮ ಹೋರಾಟದ ಬಗ್ಗೆ ಚರ್ಚಿಸುತ್ತೇವೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.