ವೈದ್ಯರು
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ‘ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಜ್ಯ ಘಟಕ ನೀಡುವ ಪ್ರಸಕ್ತ ಸಾಲಿನ ‘ವೈದ್ಯರ ದಿನ’ ಪ್ರಶಸ್ತಿಗೆ ಹೊನ್ನಾವರದ ಡಾ. ಅನುಪಮಾ ಎಚ್.ಎಸ್. ಸೇರಿದಂತೆ 14 ವೈದ್ಯರು ಆಯ್ಕೆಯಾಗಿದ್ದಾರೆ’ ಎಂದು ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ. ವೀರಭದ್ರಪ್ಪ ವಿ. ಚಿನಿವಾಲರ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಾ. ಬಸವರಾಜ್ ವಿ. ಕಂಬಲ್ಯಾಳ್ (ರೋಣ), ಡಾ. ಚನ್ನಬಸಪ್ಪ ಬವಲಿಂಗಪ್ಪ ನಾವಡಗಿ (ಸವದತ್ತಿ), ಡಾ. ಗೋಪಾಲಕೃಷ್ಣ ಗುಪ್ತ (ಮಂಡ್ಯ), ಡಾ.ಎಚ್.ಆರ್. ಮಹೇಶ್ವರಪ್ಪ (ಬೆಂಗಳೂರು), ಡಾ.ಕೆ.ಎಂ. ನಾಯಕ್ (ರಾಯಚೂರು), ಡಾ.ಕೆ. ರಾಮಚಂದ್ರ ಕಾಮತ್ (ಮಂಗಳೂರು), ಡಾ.ಎಚ್. ನಾಗರಾಜ್ (ಶಿವಮೊಗ್ಗ), ಡಾ.ಎಚ್.ಎಲ್. ಪ್ರೇಮಲತಾ (ಹಾಸನ), ಡಾ. ರಾಜೇಂದ್ರ ಕುಮಾರ್ (ಕೆಜಿಎಫ್), ಡಾ.ಜೆ. ಶರಣಪ್ಪ (ಬೆಂಗಳೂರು), ಡಾ. ವನಮಾಲಾ ವಿ. ಹೆಸರೂರು (ಲಿಂಗಸುಗೂರು), ಡಾ. ವೀಣಾ ಭಟ್ (ಭದ್ರಾವತಿ), ಡಾ.ವೈ. ಪರ್ವತ ರೆಡ್ಡಿ (ಬಳ್ಳಾರಿ) ಆಯ್ಕೆಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಜುಲೈ 1ರಂದು ಆಯೋಜಿಸಿರುವ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ, ನೇತ್ರ ತಜ್ಞ ಡಾ.ಎನ್.ಟಿ. ಶ್ರೀನಿವಾಸ್ ಭಾಗವಹಿಸಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.