ADVERTISEMENT

ಸಿ.ಎಂ ಪರಿಹಾರ ನಿಧಿಗೆ ₹32 ಕೋಟಿ ದೇಣಿಗೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 20:16 IST
Last Updated 19 ಆಗಸ್ಟ್ 2019, 20:16 IST
   

ಬೆಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ನೀಡಿದ ₹25 ಕೋಟಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ₹ 5 ಕೋಟಿ ಸಹಿತ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸೋಮವಾರ ₹ 32.22 ಕೋಟಿ ದೇಣಿಗೆ ಸಂದಾಯವಾಗಿದೆ.

ಕೆಎಂಎಫ್‌ನಿಂದ ₹ 1 ಕೋಟಿ, ದಾವಣಗೆರೆಯ ಶಾಸಕ ಹಾಗೂ ಬಾಪೂಜಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ವೈಯಕ್ತಿಕ ₹ 25 ಲಕ್ಷ, ಶಿಕ್ಷಣ ಸಂಸ್ಥೆಯ ₹ 44 ಲಕ್ಷ ಸೇರಿದಂತೆ ಒಟ್ಟು ₹ 69 ಲಕ್ಷ, ಜಯದೇವ ಹೃದ್ರೋಗ ಸಂಸ್ಥೆಯಿಂದ₹ 28 ಲಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ₹ 25 ಲಕ್ಷ ದೇಣಿಗೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ವೀಕರಿಸಿದರು.

ರಾಜ್ಯ ಸರ್ಕಾರಿ ನಿವೃತ್ತ ನೌಕರರು ತಮ್ಮ ಒಂದು ದಿನದ ಪಿಂಚಣಿ ನೀಡುವುದಾಗಿ ಪತ್ರ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.