ADVERTISEMENT

ದತ್ತಿ ಪುಸ್ತಕ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 19:50 IST
Last Updated 17 ಡಿಸೆಂಬರ್ 2019, 19:50 IST
ಪ್ರಶಸ್ತಿ ಪುರಸ್ಕೃತರರಾದ (ಕುಳಿತವರು ಎಡದಿಂದ) ಶರಣಪ್ಪ ಬೇವಿನಕಟ್ಟಿ, ವಿ ವಿ ಗೋಪಾಲ್‌, ಡಾ.ಆರ್‌ ವಾದಿರಾಜು, ಜಯಶ್ರೀ ರಾಜು, (ನಿಂತವರು) ಪುಷ್ಪಾ ಜಿ, ಶ್ರೀದೇವಿ ಕೃಷ್ಣಪ್ಪ ಅವರನ್ನು ಗೌರವಿಸಲಾಯಿತು. (ನಿಂತವರು ಎಡದಿಂದ) ಬಿ.ಎನ್. ಮಧುಸೂದನ್‌,ಡಾ. ಗೀತಾ ರಾಮಾನುಜಂ, ಡಾ. ರಾಮಲಿಂಗೇಶ್ವರ, ವಿದ್ವಾಂಸ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ರಾಂ.ಕೆ.ಹನುಮಂತಯ್ಯ, ಪಾನ್ಯಂ ನಟರಾಜು, ಪ್ರೊ. ಆರ್.ವಿ. ಮಂಜುನಾಥ, ಬಸವರಾಜ ಇದ್ದಾರೆ ಪ್ರಜಾವಾಣಿ ಚಿತ್ರ

ಬೆಂಗಳೂರು:ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದಸಾಹಿತಿ ರಾಂ.ಕೆ. ಹನುಮಂತಯ್ಯ ಮತ್ತು ದಿವಂಗತ ಹೆಬ್ಬಗೋಡಿ ಗೋಪಾಲ್ ದತ್ತಿ ಪುಸ್ತಕ ಬಹುಮಾನವನ್ನು ಸಾಹಿತಿಗಳಿಗೆ ಮಂಗಳವಾರ ಪ್ರದಾನ ಮಾಡಲಾಯಿತು.

ಶೇಷಾದ್ರಿಪುರಂ ಕಾಲೇಜಿನಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಗೀತಾ ರಾಮಾನುಜಂ, ‘ಅಧ್ಯಾತ್ಮವು ಒಂದು ಸಮುದಾಯ ಅಥವಾ ಹಿರಿಯರಿಗೆ ಸಂಬಂಧಪಟ್ಟಿದ್ದು ಎಂದು ಯುವಪೀಳಿಗೆ ತಪ್ಪಾಗಿ ಭಾವಿಸಿದೆ. ಅಧ್ಯಾತ್ಮ ಎಂದರೆ ನಮ್ಮನ್ನು ನಾವು ಅವಲೋಕನ ಮಾಡಿಕೊಳ್ಳುವುದು. ಮನಸ್ಸಿನಿಂದ ಕಲುಷಿತ ಚಿಂತನೆಗಳನ್ನು ತೆಗೆದುಹಾಕುವುದು’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ ರಾಂ.ಕೆ. ಹನುಮಂತಯ್ಯ, ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್.ವಿ. ಮಂಜುನಾಥ, ಕರ್ನಾಟಕಪ್ರತಿಭಾ ಕೇಂದ್ರದ ಅಧ್ಯಕ್ಷ ಪಾನ್ಯಂ ನಟರಾಜು, ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಡಾ.ಎನ್. ರಾಮಲಿಂಗೇಶ್ವರ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.