ADVERTISEMENT

ಪ್ರಶ್ನೆ ಕೇಳಲು ಹಿಂಜರಿಕೆ ಬೇಡ: ರೋಹನ್ ಶ್ರವಣ್

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 21:08 IST
Last Updated 11 ಸೆಪ್ಟೆಂಬರ್ 2025, 21:08 IST
<div class="paragraphs"><p>ರೇವಾ ವಿಶ್ವವಿದ್ಯಾಲಯದ 2025–2026ನೇ ಸಾಲಿನ ಹೊಸ ಶೈಕ್ಷಣಿಕ ಬ್ಯಾಚ್‌ನ ಸ್ವಾಗತ ಕಾರ್ಯಕ್ರಮದಲ್ಲಿ ಡಾ. ಬೀನಾ ಜಿ, ಸತ್ಯ ಲಂಕಾ, ರೋಹನ್ ಶ್ರವಣ್‌, ಡಾ. ಪಿ. ಶ್ಯಾಮರಾಜು,ಡಾ. ಸಂಜಯ್ ಆರ್. ಚಿಟ್ನಿಸ್, ಡಾ. ಆರ್. ಸಿ. ಬಿರಾದಾರ್, ಕೆ. ಎಸ್. ನಾರಾಯಣಸ್ವಾಮಿ ಭಾಗವಹಿಸಿದ್ದರು</p></div>

ರೇವಾ ವಿಶ್ವವಿದ್ಯಾಲಯದ 2025–2026ನೇ ಸಾಲಿನ ಹೊಸ ಶೈಕ್ಷಣಿಕ ಬ್ಯಾಚ್‌ನ ಸ್ವಾಗತ ಕಾರ್ಯಕ್ರಮದಲ್ಲಿ ಡಾ. ಬೀನಾ ಜಿ, ಸತ್ಯ ಲಂಕಾ, ರೋಹನ್ ಶ್ರವಣ್‌, ಡಾ. ಪಿ. ಶ್ಯಾಮರಾಜು,ಡಾ. ಸಂಜಯ್ ಆರ್. ಚಿಟ್ನಿಸ್, ಡಾ. ಆರ್. ಸಿ. ಬಿರಾದಾರ್, ಕೆ. ಎಸ್. ನಾರಾಯಣಸ್ವಾಮಿ ಭಾಗವಹಿಸಿದ್ದರು

   

ಬೆಂಗಳೂರು: ‘ವಿದ್ಯಾರ್ಥಿಗಳು ಕುತೂಹಲವನ್ನು ಉಳಿಸಿಕೊಳ್ಳಲು, ಪ್ರಶ್ನೆಗಳನ್ನು ಕೇಳಲು ಎಂದಿಗೂ ಹಿಂಜರಿಯಬಾರದು. ತಮ್ಮ ಕನಸುಗಳ ಕಡೆಗೆ ಸಾಗುವುದಕ್ಕೆ ವಿಳಂಬ ಮಾಡದೆ ಕೆಲಸ ಶುರು ಮಾಡಬೇಕು’ ಎಂದು ಟ್ರೆಸಾ ಮೋಟಾರ್ಸ್‌ನ ಸಂಸ್ಥಾಪಕ ರೋಹನ್ ಶ್ರವಣ್ ಹೇಳಿದರು.

ರೇವಾ ವಿಶ್ವವಿದ್ಯಾಲಯವು 2025–2026ನೇ ಸಾಲಿನ ತನ್ನ ಹೊಸ ಶೈಕ್ಷಣಿಕ ಬ್ಯಾಚ್ ಸ್ವಾಗತಕ್ಕೆ ಹಮ್ಮಿಕೊಂಡಿದ್ದ ‘ಸೌಗಂಧಿಕಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ಒರಾಕಲ್ ಗ್ಲೋಬಲ್ ಸರ್ವೀಸಸ್ ಸೆಂಟರ್‌ನ ಉಪಾಧ್ಯಕ್ಷ ಸತ್ಯ ಲಂಕಾ ಅವರು ವಾಸ್ತವದ ಪರಿಶೀಲನೆ ಜೊತೆಗೆ, ವಿಶ್ವವಿದ್ಯಾಲಯ ಜೀವನದ ಪರಿವರ್ತನಾ ಸ್ವರೂಪದ ಬಗ್ಗೆ ಮಾತನಾಡಿದರು.

ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ. ಶ್ಯಾಮ ರಾಜು ಮಾತನಾಡಿ, ಶೈಕ್ಷಣಿಕ ಶ್ರೇಷ್ಠತೆ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಪೋಷಿಸುವ ಸಮಗ್ರ ಪರಿಸರ ವ್ಯವಸ್ಥೆಯನ್ನು ರೂಪಿಸುವುದು ಸಂಸ್ಥೆಯ ಧ್ಯೇಯವಾಗಿದೆ ಎಂದರು.

ಕುಲಪತಿ ಸಂಜಯ್ ಆರ್. ಚಿಟ್ನಿಸ್, ಸಮ ಕುಲಾಧಿಪತಿ ಆರ್.ಸಿ. ಬಿರಾದಾರ್, ಕುಲಸಚಿವ ಕೆ.ಎಸ್. ನಾರಾಯಣಸ್ವಾಮಿ, ಕುಲಸಚಿವ (ಮೌಲ್ಯಮಾಪನ) ಬೀನಾ ಜಿ, ಬೋಧಕ ವೃಂದ, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.