ADVERTISEMENT

ಬೆಂಗಳೂರು | ರಾಜ್‌ ಪುಣ್ಯಸ್ಮರಣೆ: ಸಮಾಧಿಗೆ ಪೂಜೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 20:43 IST
Last Updated 12 ಏಪ್ರಿಲ್ 2025, 20:43 IST

ಬೆಂಗಳೂರು: ವರನಟ ರಾಜ್‌ಕುಮಾರ್‌ ಅವರ 19ನೇ ಪುಣ್ಯತಿಥಿ ಅಂಗವಾಗಿ ಶನಿವಾರ ಕಂಠೀರವ ಸ್ಟುಡಿಯೊದಲ್ಲಿರುವ ಅವರ ಸಮಾಧಿಗೆ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು. 

ನಟ ಶಿವರಾಜ್‌ಕುಮಾರ್‌ ದಂಪತಿ, ನಟ ರಾಘವೇಂದ್ರ ರಾಜ್‌ಕುಮಾರ್‌ ದಂಪತಿ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಪುತ್ರಿ ಲಕ್ಷ್ಮಿ ಸೇರಿದಂತೆ ಕುಟುಂಬದ ಸದಸ್ಯರು, ನೂರಾರು ಅಭಿಮಾನಿಗಳು ಸಮಾಧಿಗೆ ಪುಷ್ಪನಮನ ಅರ್ಪಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್‌ಕುಮಾರ್‌, ‘ಕಲಾಸೇವೆ, ಗಾಯನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾಡಿದ ಜನರ ಸೇವೆ, ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಭಾಷೆಗೋಸ್ಕರ ಗೋಕಾಕ್‌ ಚಳವಳಿಯಲ್ಲಿ ಭಾಗವಹಿಸಿದ್ದು ಹೀಗೆ ಹಲವು ಉದಾಹರಣೆಗಳಿಂದಾಗಿ ರಾಜ್‌ಕುಮಾರ್‌ ಅವರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಬೇರೂರಿದ್ದಾರೆ. ರಾಜ್‌ಕುಮಾರ್‌ ಅವರು ಎಲ್ಲರಿಗೂ ಒಂದು ಪಾಠವಿದ್ದಂತೆ. ಅವರ ಮಗ ಎನ್ನಲು ಹೆಮ್ಮೆಯಾಗುತ್ತದೆ’ ಎಂದರು.    

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.