ಬೆಂಗಳೂರು: ‘ನಮ್ಮ ಮೆಟ್ರೊ’ ಹಳದಿ ಮಾರ್ಗದ ಸಂಚಾರಕ್ಕಾಗಿ ಚೀನಾದಿಂದ ತರಲಾದ ಚಾಲಕರಹಿತ ಮೆಟ್ರೊ ರೈಲು ಒಂದು ಸೆಟ್ ಬೋಗಿಗಳು ಹೆಬ್ಬಗೋಡಿ ಡಿಪೊಗೆ ಬುಧವಾರ ಸುರಕ್ಷಿತವಾಗಿ ತಲುಪಿವೆ.
ಮೆಟ್ರೊ ಹಳದಿ ಮಾರ್ಗದ ಆರ್.ವಿ ರಸ್ತೆ ನಿಲ್ದಾಣದಿಂದ ಬೊಮ್ಮಸಂದ್ರ ವರೆಗಿನ ನೂತನ ಮಾರ್ಗದಲ್ಲಿ ಚಾಲಕರಹಿತ ಮೆಟ್ರೊ ರೈಲು ಸಂಚರಿಸಲಿದೆ. ಮಾರ್ಗ ಆರಂಭಗೊಳ್ಳುವ ಮೊದಲು ಪರೀಕ್ಷೆಗಾಗಿ ಎರಡು ಸೆಟ್ ಬೋಗಿಗಳು (ಒಂದು ಸೆಟ್ ಅಂದರೆ 6 ಬೋಗಿ) ಚೀನಾದಿಂದ ಚೆನ್ನೈಗೆ ಕಳುಹಿಸಲಾಗಿತ್ತು. ಅಲ್ಲಿಂದ ಒಂದು ಸೆಟ್ ಬೆಂಗಳೂರಿಗೆ ತಲುಪಿದ್ದು, ಕೆಲವೇ ದಿನಗಳಲ್ಲಿ ಮತ್ತೊಂದು ಸೆಟ್ ಕೂಡ ಹೆಬ್ಬಗೋಡಿ ಡಿಪೊ ತಲುಪಲಿದೆ.
ಈ ಮಾರ್ಗದಲ್ಲಿ ವಿವಿಧ ಪರೀಕ್ಷೆ ಮತ್ತು ಪರಿಶೀಲನೆಗಳು ಇನ್ನು ಆರಂಭಗೊಳ್ಳಲಿವೆ. ಅವುಗಳ ವರದಿ ಸಲ್ಲಿಕೆಯಾದ ಬಳಿಕ ಸಾರ್ವಜನಿಕ ಸಂಚಾರಕ್ಕೆ ತೆರೆದುಕೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.