ADVERTISEMENT

ಬೆಂಗಳೂರು: ಚಾಲಕ ರಹಿತ ಮೆಟ್ರೊ ರೈಲು ಪ್ರಯೋಗಾರ್ಥ ಸಂಚಾರ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 19:02 IST
Last Updated 7 ಮಾರ್ಚ್ 2024, 19:02 IST
ಚಾಲಕರಹಿತ ತಂತ್ರಜ್ಞಾನದ ಮೆಟ್ರೊ ರೈಲು
ಚಾಲಕರಹಿತ ತಂತ್ರಜ್ಞಾನದ ಮೆಟ್ರೊ ರೈಲು   

ಬೆಂಗಳೂರು: ನಮ್ಮ ಮೆಟ್ರೊ ‘ಚಾಲಕ ರಹಿತ ತಂತ್ರಜ್ಞಾನ’ದ ರೈಲು ಹಳದಿ ಮಾರ್ಗದಲ್ಲಿ ಗುರುವಾರ 25 ಕಿ.ಮೀ. ದೂರ ಸಂಚರಿಸಿ ಪರೀಕ್ಷೆ ನಡೆಸಿತು.

ಹೆಬ್ಬಗೋಡಿಯಲ್ಲಿರುವ ಮೆಟ್ರೊ ಡಿಪೊದಿಂದ ಬೊಮ್ಮಸಂದ್ರವರೆಗೆ ಸಂಚರಿಸಿ ಮತ್ತೆ ಹೆಬ್ಬಗೋಡಿಗೆ ವಾಪಸ್‌ ಆಯಿತು. ಬಿಎಂಆರ್‌ಸಿಎಲ್‌ನ ಎಲ್ಲ ತಂತ್ರಜ್ಞರೂ ರೈಲಿನಲ್ಲಿ ಪ್ರಯಾಣಿಸಿ, ಪರಿಶೀಲನೆ ನಡೆಸಿದರು.

ಸಂಜೆ 6.55ಕ್ಕೆ ಸಂಚಾರವನ್ನು ಗಂಟೆಗೆ 10 ಕಿ.ಮೀ ವೇಗದಲ್ಲಿ ಆರಂಭಿಸಿತು. ಗರಿಷ್ಠ ಗಂಟೆಗೆ 25 ಕಿ.ಮೀ. ವೇಗದಲ್ಲಿ ಚಲಿಸಿತು. ರಾತ್ರಿ 7.14ಕ್ಕೆ ಬೊಮ್ಮಸಂದ್ರ ತಲುಪಿತು. ಅಲ್ಲಿಂದ ರಾತ್ರಿ 8.05ಕ್ಕೆ ಹೊರಟು ರಾತ್ರಿ 9.11ಕ್ಕೆ ಹೆಬ್ಬಗೋಡಿಗೆ ತಲುಪಿತು ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.