ADVERTISEMENT

ಹೊಟ್ಟೆಯಲ್ಲಿ ₹ 7 ಕೋಟಿ ಮೌಲ್ಯದ ಡ್ರಗ್ಸ್

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 2:12 IST
Last Updated 25 ಫೆಬ್ರುವರಿ 2022, 2:12 IST
   

ಬೆಂಗಳೂರು: ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ ₹ 7 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿರುವ ಕಸ್ಟಮ್ಸ್ ಅಧಿಕಾರಿಗಳು, ಉಗಾಂಡಾ ಪ್ರಜೆಯೊಬ್ಬರನ್ನು ಬಂಧಿಸಿದ್ದಾರೆ.

‘ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಾರ್ಜಾದಿಂದ ಬಂದಿಳಿದಿದ್ದ ವಿಮಾನದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಮಾಹಿತಿ ಬಂದಿತ್ತು. ಕಾರ್ಯಾಚರಣೆ ನಡೆಸಿದಾಗ ಡ್ರಗ್ಸ್ ಸಾಗಣೆ ಪತ್ತೆಯಾಯಿತು’ ಎಂದು ಕಸ್ಟಮ್ಸ್ ಮೂಲಗಳು ಹೇಳಿವೆ.

‘ವಿಮಾನದಲ್ಲಿ ಪ್ರಯಾಣಿಸಿದ್ದ ಎಲ್ಲರನ್ನೂ ಲೋಹ ಶೋಧಕದ ಮೂಲಕ ತಪಾಸಣೆ ನಡೆಸಲಾಯಿತು. ಒಬ್ಬ ಪ್ರಯಾಣಿಕನ ಮೇಲೆ ಅನುಮಾನ ಬಂದಿತ್ತು. ಆತನನ್ನು ವಿಶೇಷ ಕೊಠಡಿಗೆ ಕರೆದೊಯ್ದು ಪುನಃ ತಪಾಸಣೆ ನಡೆಸಲಾಯಿತು. ಆತನ ಹೊಟ್ಟೆಯಲ್ಲಿ ಡ್ರಗ್ಸ್ ಇರುವುದು ಖಾತ್ರಿಯಾಗಿತ್ತು.’

ADVERTISEMENT

‘ಪ್ರಯಾಣಿಕನನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಂದ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಆತನ ಹೊಟ್ಟೆಯಲ್ಲಿದ್ದ 1 ಕೆ.ಜಿ ತೂಕದ 79 ಹೆರಾಯಿನ್ ಮಾತ್ರೆಗಳನ್ನು ವೈದ್ಯರು ಹೊರಗೆ ತೆಗೆದಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಮಾತ್ರೆ ನುಂಗಿ ಸಾಗಣೆ: ‘ಹೆರಾಯಿನ್ ಮಾತ್ರೆಗಳನ್ನು ನುಂಗಿ ಹೊಟ್ಟೆಯಲ್ಲಿಟ್ಟುಕೊಂಡು ಸಾಗಿಸುತ್ತಿದ್ದ ವ್ಯಕ್ತಿಯನ್ನು ಕಳೆದ ವರ್ಷ ಬಂಧಿಸಲಾಗಿತ್ತು. ಈಗ ಅದೇ ಮಾದರಿಯಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಉಗಾಂಡಾ ಪ್ರಜೆ ಸಿಕ್ಕಿಬಿದ್ದಿದ್ದಾನೆ. ಇದೊಂದು ದೊಡ್ಡ ಜಾಲವಿರುವ ಮಾಹಿತಿ ಇದೆ’ ಎಂದೂ ಕಸ್ಟಮ್ಸ್ ಮೂಲಗಳು ಹೇಳಿವೆ.

‘ಕರ್ನಾಟಕ ಹಾಗೂ ತಮಿಳುನಾಡಿನಲ್ಲಿರುವ ಪೆಡ್ಲರ್‌ಗಳಿಗೆ ಹೆರಾಯಿನ್ ತಲುಪಿಸುವುದು ಉಗಾಂಡಾ ಪ್ರಜೆಯ ಉದ್ದೇಶವಾಗಿತ್ತು’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.