ADVERTISEMENT

ಪೊಲೀಸರ ಜೊತೆ ಕುಡುಕನ ರಂಪಾಟ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 22:34 IST
Last Updated 8 ಜೂನ್ 2021, 22:34 IST
ಕುಡುಕನ ರಂಪಾಟ-ಪ್ರಾತಿನಿಧಿಕ ಚಿತ್ರ
ಕುಡುಕನ ರಂಪಾಟ-ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದ ಕಾರ್ಪೊರೇಷನ್ ವೃತ್ತದಲ್ಲಿ ಬೈಕ್ ತಡೆದು ನಿಲ್ಲಿಸಿದರೆಂಬ ಕಾರಣಕ್ಕೆ ಪೊಲೀಸರ ಜೊತೆ ಕುಡುಕನೊಬ್ಬ ಮಂಗಳವಾರ ರಂಪಾಟ ಮಾಡಿದ್ದಾನೆ.

‘ಪಾನಮತ್ತನಾಗಿ ಬೈಕ್ ಚಲಾಯಿಸಿಕೊಂಡು ಹೊರಟಿದ್ದ ಸವಾರರನ್ನು ತಡೆದು ತಪಾಸಣೆ ನಡೆಸಲಾಯಿತು. ಮದ್ಯದ ಅಮಲಿನಲ್ಲಿ ಆತ ಮಾತನಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ. ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬೈಕ್ ತಡೆದಿದ್ದಕ್ಕೆ ಎಎಸ್‌ಐ ಅವರ ಜೊತೆ ಜಗಳ ತೆಗೆದ ಕುಡುಕ, ‘ಎಷ್ಟು ದಂಡವಿದೆ ಹೇಳು ಕಟ್ಟುತ್ತೇನೆ’ ಎಂದಿದ್ದ. ನಿಲ್ಲಲು ಆಗದಷ್ಟು ಮದ್ಯ ಕುಡಿದಿದ್ದ ಆತನಿಗೆ ಬುದ್ಧಿವಾದ ಹೇಳಿದ್ದ ಎಎಸ್‌ಐ, ರಸ್ತೆ ಪಕ್ಕದಲ್ಲಿ ಕುಳಿತುಕೊಳ್ಳುವಂತೆ ತಿಳಿಸಿದ್ದರು. ಅದಕ್ಕೆ ಒಪ್ಪದ ಆತ, ರಸ್ತೆಯಲ್ಲೆಲ್ಲ ಓಡಾಡಿದ್ದ. ಮಾಸ್ಕ್ ಸಹ ಹಾಕಿರಲಿಲ್ಲ’

ADVERTISEMENT

‘ಪಿಎಸ್‌ಐ ಸ್ಥಳಕ್ಕೆ ಬರುತ್ತಿದ್ದಂತೆ ಕುಡುಕ, ದಂಡ ಕಟ್ಟುವುದಾಗಿ ಹೇಳಿದ್ದ. ‘ಬೇಕಾದರೆ ನನಗೆ ಹೊಡೆಯಿರಿ’ ಎಂದು ಕೂಗಾಡಿದ್ದ. ಕುಡುಕನ ಸಹವಾಸ ಬೇಡವೆಂದು ಪೊಲೀಸರು ದೂರ ಹೋಗಿ ನಿಲ್ಲುತ್ತಿದ್ದರು. ಈ ಎಲ್ಲ ದೃಶ್ಯವು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.