ADVERTISEMENT

ಸಿಸಿಬಿ ಪೊಲೀಸರ ಕಾರ್ಯಾಚರಣೆ: ₹3.75 ಲಕ್ಷದ ವಿದೇಶಿ ಸಿಗರೇಟ್‌ ಜಪ್ತಿ

ನಗರದಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 14:44 IST
Last Updated 7 ಜೂನ್ 2023, 14:44 IST
ಸಿಸಿಬಿ ಪೊಲೀಸರು ಜಪ್ತಿ ಮಾಡಿದ ಇ–ಸಿಗರೇಟ್‌.
ಸಿಸಿಬಿ ಪೊಲೀಸರು ಜಪ್ತಿ ಮಾಡಿದ ಇ–ಸಿಗರೇಟ್‌.   

ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಬುಧವಾರ ಕಾರ್ಯಾಚರಣೆ ನಡೆಸಿ ₹3.75 ಲಕ್ಷದ ಇ–ಸಿಗರೇಟು ಹಾಗೂ ವಿದೇಶಿ ಸಿಗರೇಟ್‌ ಅನ್ನು ಜಪ್ತಿ ಮಾಡಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಕೋರಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯ ಮೇಘನಾ ಫುಡ್‌ ಬಳಿಯ ದಿ. ಸ್ಮೋಕ್‌ ಶಾಪ್‌ನಲ್ಲಿ ಇ– ಸಿಗರೇಟ್‌ ಮಾರಾಟ ಮಾಡುತ್ತಿದ್ದರು. ಅವರಿಂದ ₹3.75 ಲಕ್ಷದ ಇ–ಸಿಗರೇಟ್‌ ಹಾಗೂ 11,900 ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಇ-ಸಿಗರೇಟ್ ಆರೋಗ್ಯಕ್ಕೆ ಮಾರಕ ಎಂದು ಕೇಂದ್ರ ಸರ್ಕಾರವು ಹಿಂದೆಯೇ ನಿಷೇಧ ಮಾಡಿತ್ತು. ಆದರೂ, ಆರೋಪಿಗಳು ಹೊರ ರಾಜ್ಯದಿಂದ ಇ–ಸಿಗರೇಟ್‌, ಅದರ ಲಿಕ್ವಿಡ್‌, ಪಾಡ್‌ ಹಾಗೂ ಬ್ಯಾಟರಿ ಹಾಗೂ ಇತರೆ ಬಿಡಿಭಾಗಗಳನ್ನು ತಂದು ಮಾರಾಟ ಮಾಡುತ್ತಿರುವುದು ನಗರದಲ್ಲಿ ಕಂಡುಬರುತ್ತಿದೆ. ಕಳೆದ ತಿಂಗಳು ನಗರದ ಕುಂಬಾರಪೇಟೆ ನಂಬೂದರಿ ಮ್ಯಾನ್‌ಷನ್‌ 2ನೇ ಮಹಡಿ ವರ್ಧಮಾನ್ ಮಾರ್ಕೆಟಿಂಗ್‌ ಎಂಬ ಗೋದಾಮಿನ ಮೇಲೆ ದಾಳಿ ನಡೆಸಿ, ₹ 1.25 ಕೋಟಿ ಮೌಲ್ಯದ ವಸ್ತು ಜಪ್ತಿ ಮಾಡಿಕೊಳ್ಳಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.