ADVERTISEMENT

ಈಸ್ಟ್‌ ವೆಸ್ಟ್‌ ಕಾಲೇಜು: ವಿಜ್ಞಾನ ಮಾದರಿಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 15 ಮೇ 2019, 17:32 IST
Last Updated 15 ಮೇ 2019, 17:32 IST

ರಾಜರಾಜೇಶ್ವರಿನಗರ: ಅಂಜನಾ ನಗರ ಬಳಿಯ ಬಿಇಎಲ್‌ ಬಡಾವಣೆಯ ಈಸ್ಟ್‌–ವೆಸ್ಟ್‌ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದ ವಿದ್ಯಾರ್ಥಿಗಳಿಂದ ‘ವಿಜ್ಞಾನ ಮಾದರಿಗಳ ಪ್ರದರ್ಶನ’ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ರೂಪಿಸಿದ್ದ 50ಕ್ಕೂ ಹೆಚ್ಚು ಮಾದರಿಗಳು ಪ್ರದರ್ಶನದಲ್ಲಿ ಇದ್ದವು. ಅವುಗಳನ್ನು ನೋಡಲು ವಿವಿಧ ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಬಂದಿದ್ದರು.

ಈಸ್ಟ್‌–ವೆಸ್ಟ್‌ ತಾಂತ್ರಿಕ ಕಾಲೇಜಿನ ಅಧ್ಯಕ್ಷ ಸಿ.ಎನ್‌.ರವಿಕಿರಣ್‌, ‘ವಿದ್ಯಾರ್ಥಿಗಳು ಅನ್ವೇಷಣೆಗಳ ಕಡೆಗೆ ಗಮನ ಹರಿಸುತ್ತಿರುವುದು ಉತ್ತಮ ಬೆಳವಣಿಗೆ. ಸಂಶೋಧನೆಗಳನ್ನು ಕೈಗೊಂಡು ದೇಶಕ್ಕೆ ಕೊಡುಗೆ ನೀಡಲು ನಾವು ಸಹ ಪ್ರೋತ್ಸಾಹಿಸುತ್ತಿದ್ದೇವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.