ಬೆಂಗಳೂರು: ಆರ್ಥಿಕ ವಿನಿಮಯ ಉತ್ತೇಜನದ ಜೊತೆಗೆ ಕೈಗಾರಿಕೆ ಪ್ರವೃತ್ತಿಗಳನ್ನು ಪರಸ್ಪರ ಹಂಚಿಕೊಳ್ಳಲು ಜಪಾನ್‌ನ ನಗೋಯಾ ನಗರ ಹಾಗೂ ಬೆಂಗಳೂರು ಮುಂದಾಗಿವೆ.
ನಗೋಯಾದ ಮೇಯರ್ ಇಚಿರೋ ಹಿರೊಸಾವಾ ಮತ್ತು ಬಿಬಿಎಂಪಿಯ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರು ಸೋದರಿ ನಗರಗಳ ಉತ್ತೇಜನಕ್ಕಾಗಿ ಒಪ್ಪಂದದ ಜಂಟಿ ಘೋಷಣೆಗೆ (ಜೆಡಿಐ) ಸೋಮವಾರ ಸಹಿ ಹಾಕಿದರು.
‘ನಗೋಯಾ ನಗರವು ಸುಂದರವಾದ ಸ್ಥಳವಾಗಿದ್ದು, ಅಲ್ಲಿನ ಸಂಸ್ಥೆಗಳು ಹೆಚ್ಚಾಗಿ ಬೆಂಗಳೂರು ನಗರಕ್ಕೆ ಬರಬೇಕೆಂದು ಇಚ್ಛಿಸುತ್ತೇನೆ’ ಎಂದು ತುಷಾರ್ ಗಿರಿನಾಥ್ ಹೇಳಿದರು.
‘ಬಿಬಿಎಂಪಿ ಜೊತೆ ನಗೋಯಾದ ಒಪ್ಪಂದದಿಂದ ವ್ಯಾಪಾರ ಬೆಳವಣಿಗೆಗೆ ಭಾರಿ ಉತ್ತೇಜನ ಸಿಗಲಿದೆ. ಇದರಿಂದ ಜಪಾನ್‌ನ ಸಾಕಷ್ಟು ಸಂಸ್ಥೆಗಳು ಬೆಂಗಳೂರು ನಗರಕ್ಕೆ ಬರಲು ಸಹಕಾರಿ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
ಇಚಿರೋ ಹಿರೊಸಾವಾ ಮಾತನಾಡಿ, ‘ಬೆಂಗಳೂರು ನಗರದಲ್ಲಿ ಈಗಾಗಲೇ ಸಾಕಷ್ಟು ಸಂಸ್ಥೆಗಳಿದ್ದು, ಎರಡೂ ನಗರಗಳ ಜೊತೆ ಆರ್ಥಿಕ ವಿನಿಮಯ ಈ ಒಪ್ಪಂದದಿಂದ ಇನ್ನಷ್ಟು ವೃದ್ಧಿಯಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.