ADVERTISEMENT

ಚುನಾವಣಾ ವೆಚ್ಚ 4ರೊಳಗೆ ದಾಖಲೆ ಹಾಜರಿಗೆ ಸೂಚನೆ

ಲೋಕಸಭಾ ಅಭ್ಯರ್ಥಿಗಳ ಚುನಾವಣಾ ವೆಚ್ಚ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 20:02 IST
Last Updated 1 ಏಪ್ರಿಲ್ 2019, 20:02 IST

ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಗಳು ಚುನಾವಣಾ ಖರ್ಚು–ವೆಚ್ಚಗಳ ಬಗ್ಗೆ ಇದೇ 4ರೊಳಗೆ ಮೊದಲ ಕಂತಿನ ದಾಖಲೆ ಹಾಜರುಪಡಿಸಬೇಕು ಎಂದು ವೆಚ್ಚ ವೀಕ್ಷಕ ವಿಬೋರ್ ಬಡೋನಿ ಸೂಚಿಸಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘8ರಂದು ಎರಡನೇ ವರದಿ, 12ರಂದು ಮೂರನೇ ವರದಿ ಹಾಗೂ 16ರಂದು ಅಂತಿಮ ವರದಿ ಸಲ್ಲಿಸಬೇಕು. ಇದರೊಂದಿಗೆ ಚುನಾವಣಾ ದಿನ, ಅದಕ್ಕೂ ಮುನ್ನ ದಿನದ ವರದಿಗಳನ್ನು ಸಲ್ಲಿಸಬೇಕಿದೆ. ಮತ ಎಣಿಕೆ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಿ ವೆಚ್ಚದ ಮಾಹಿತಿ ಪಡೆಯಲಾಗುತ್ತದೆ’ ಎಂದರು.

ಆಯೋಗದ ವಿವಿಧ ತಂಡಗಳು ನಿಯೋಜಿತ ಸಿಬ್ಬಂದಿಯೊಂದಿಗೆ ಅಭ್ಯಥಿಗಳ ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸಲಿದ್ದು ಕಾಲಕಾಲಕ್ಕೆ ವರದಿ ಸಲ್ಲಿಸಲಿವೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.