ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆ: ವೇಳಾಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 20:24 IST
Last Updated 24 ಆಗಸ್ಟ್ 2020, 20:24 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಮತದಾರರ ಪಟ್ಟಿಯು 2021ರ ಜನವರಿ 15 ಕ್ಕೆ ಪರಿಷ್ಕರಣೆಗೊಳ್ಳಲಿದೆ. ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆನಗರದ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ವೇಳಾಪಟ್ಟಿ ನಿಗದಿಪಡಿಸಿದ್ದಾರೆ.

ಮತಗಟ್ಟೆಗಳ ವಿಭಾಗೀಯ ಮರುಜೋಡಣೆ, ಒಬ್ಬ ಮತದಾರರ ಹೆಸರು ಬೇರೆ ಬೇರೆ ಪಟ್ಟಿಯಲ್ಲಿದ್ದರೆ ಅವುಗಳನ್ನು ತೆಗೆದು ಹಾಕುವುದು, ಮತಗಟ್ಟೆಯ ಗಡಿಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಗಳು ಅ.31ರವರೆಗೆ ನಡೆಯಲಿವೆ.

ನ.1ರಿಂದ 15ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ 1ರಿಂದ 8ರವರೆಗಿನ ನಮೂನೆಗಳನ್ನು ಹಾಗೂ ಮತದಾರರ ಪಟ್ಟಿಯ ಪೂರಕ ಹಾಗೂ ಸಮಗ್ರ ಕರಡುಗಳನ್ನು ಸಿದ್ಧಪಡಿಸಲಾಗುತ್ತದೆ. ನ.16ರಂದು ಮತದಾರರ ಸಮಗ್ರ ಪಟ್ಟಿಯಕರಡನ್ನು ಪ್ರಕಟಿಸಲಾಗುತ್ತದೆ. ನ.16ರಿಂದ ಡಿ. 15ರವರೆಗೆ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಹಾಗೂ ಹಕ್ಕು ಮಂಡಿಸಲು ಕಾಲಾವಕಾಶ ನೀಡಲಾಗುತ್ತದೆ. 2021ರ ಜ.5ರ ಒಳಗೆ ಮತದಾರರ ಪಟ್ಟಿಯ ಕರಡಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳ ವಿಲೇವಾರಿ ಪೂರ್ಣಗೊಳಿಸಲಾಗುತ್ತದೆ.

ADVERTISEMENT

2021ರ ಜ.14ರಂದು ಆಯೋಗದಿಂದ ಅನುಮತಿ ಪಡೆದು ಮತದಾರರ ಪಟ್ಟಿಯನ್ನು ನವೀಕರಿಸಿ, ಪೂರಕ ಪಟ್ಟಿಯನ್ನು ಮುದ್ರಿಸಲಾಗುತ್ತದೆ ಎಂದು ಬಿಬಿಎಂಪಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.