ADVERTISEMENT

ಇವಿಸಿಎಸ್ ಸೌಲಭ್ಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 21:33 IST
Last Updated 14 ಡಿಸೆಂಬರ್ 2020, 21:33 IST
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯ ಇಂಡಿಯನ್ ಆಯಿಲ್ ಚಿಲ್ಲರೆ ಮಾರಾಟ ಮಳಿಗೆಯಲ್ಲಿನ ಇಂಧನವಲಯದಲ್ಲಿ ಇಂಡಿಗ್ರೀನ್ ಸೌಲಭ್ಯ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರಕ್ಕೆ (ಇವಿಸಿಎಸ್) ತರುಣ್ ಕಪೂರ್ ಚಾಲನೆ ನೀಡಿದರು. ಡಿ.ಎಲ್. ಪ್ರಮೋದ್ ಇದ್ದರು
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯ ಇಂಡಿಯನ್ ಆಯಿಲ್ ಚಿಲ್ಲರೆ ಮಾರಾಟ ಮಳಿಗೆಯಲ್ಲಿನ ಇಂಧನವಲಯದಲ್ಲಿ ಇಂಡಿಗ್ರೀನ್ ಸೌಲಭ್ಯ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರಕ್ಕೆ (ಇವಿಸಿಎಸ್) ತರುಣ್ ಕಪೂರ್ ಚಾಲನೆ ನೀಡಿದರು. ಡಿ.ಎಲ್. ಪ್ರಮೋದ್ ಇದ್ದರು   

ಬೆಂಗಳೂರು: ವಿಮಾನ ನಿಲ್ದಾಣ ರಸ್ತೆಯ ಇಂಡಿಯನ್ ಆಯಿಲ್ ಚಿಲ್ಲರೆ ಮಾರಾಟ ಮಳಿಗೆಯ ಇಂಧನ ವಲಯದಲ್ಲಿ ಇಂಡಿಗ್ರೀನ್ ಸೌಲಭ್ಯ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರವನ್ನು (ಇವಿಸಿಎಸ್) ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ತರುಣ್ ಕಪೂರ್ ಉದ್ಘಾಟಿಸಿದರು.

ಇಂಡಿಯನ್ ಆಯಿಲ್ ಕಂಪನಿಯ ರಾಜ್ಯ ಮುಖ್ಯಸ್ಥ, ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಕರ್ನಾಟಕ ರಾಜ್ಯಮಟ್ಟದ ಸಂಯೋಜಕ ಡಿ.ಎಲ್. ಪ್ರಮೋದ್ ಅವರ ಸಮಕ್ಷಮದಲ್ಲಿ ಚಾಲನೆ ನೀಡಲಾಯಿತು. ಇಂಡಿಯನ್ ಆಯಿಲ್ ಮತ್ತು ಇಂಧನ ಗ್ರಿಡ್‌ನ ಹಿರಿಯ ಅಧಿಕಾರಿಗಳು ಹಾಜರಿದ್ದರು.

‌ಈವರೆಗೆ ಬೆಂಗಳೂರಿನ ವಿವಿಧ 19 ಕಡೆಗಳಲ್ಲಿ ಇವಿಸಿಎಸ್ ಮತ್ತು ಬ್ಯಾಟರಿ ಬದಲಾವಣೆ ಸೌಲಭ್ಯ ಒದಗಿಸಲಾಗಿದೆ. ಇಂಡಿಯನ್
ಆಯಿಲ್ ತನ್ನ ಹಸಿರು ಉಪಕ್ರಮದ ನಿಟ್ಟಿನಲ್ಲಿ ಈ ಸೌಲಭ್ಯವನ್ನು ಈ ಹಣಕಾಸು ವರ್ಷದಲ್ಲಿ ರಾಜ್ಯದಾದ್ಯಂತ 32 ಆಯ್ದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಒದಗಿಸಲಾಗುತ್ತಿದೆ ಎಂದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.