ADVERTISEMENT

ವಿದ್ಯುತ್ ಬಿಲ್ ಬಾಕಿ ನೀರಿನ ಘಟಕ ಮತ್ತೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 2:34 IST
Last Updated 19 ನವೆಂಬರ್ 2019, 2:34 IST
ಸ್ಥಗಿತಗೊಂಡಿರುವ ಹಾಲೇನಹಳ್ಳಿಯ ಶುದ್ಧ ಕುಡಿಯುವ ನೀರಿನ ಘಟಕ
ಸ್ಥಗಿತಗೊಂಡಿರುವ ಹಾಲೇನಹಳ್ಳಿಯ ಶುದ್ಧ ಕುಡಿಯುವ ನೀರಿನ ಘಟಕ   

ದಾಬಸ್ ಪೇಟೆ: ವಿದ್ಯುತ್ ಬಿಲ್ ಪಾವತಿಸದ ಕಾರಣ ನೆಲಮಂಗಲ ತಾಲ್ಲೂಕು ನರಸೀಪುರ ಪಂಚಾಯಿತಿಯ ಹಾಲೇನಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಎರಡನೇ ಬಾರಿಗೆ ಸ್ಥಗಿತಗೊಂಡಿದೆ. ಶುದ್ಧ ಕುಡಿಯುವ ನೀರಿಗಾಗಿ ಜನರು 2 ತಿಂಗಳಿಂದ ಪರದಾಡುತ್ತಿದ್ದಾರೆ.

ಸಮುದಾಯ ಶುದ್ಧ ಕುಡಿಯುವ ನೀರಿನ ಯೋಜನೆಯಡಿ ಮಾರುತಿ ಸುಜುಕಿ ಕಂಪನಿ ಈ ಘಟಕವನ್ನು ಕಟ್ಟಿಸಿಕೊಟ್ಟಿದೆ. ವಾಟರ್‌ ಲೈಫ್ ಇಂಡಿಯಾ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ. ಸೆಪ್ಟೆಂಬರ್‌ 2018ರಲ್ಲಿ ಘಟಕ ಉದ್ಘಾಟನೆಗೊಂಡಿತ್ತು. ಆಗಲೂ ಹಲವು ದಿನ ನೀರು ಬಂದಿರಲಿಲ್ಲ.

‘ಈಗ ₹ 12,741 ಬಿಲ್ ಕಟ್ಟಬೇಕಾ
ಗಿದೆ. ಇದಕ್ಕಾಗಿ ಸಂಪರ್ಕ ಕಡಿತಗೊಳಿಸಿದ್ದೇವೆ. ಘಟಕ ನಿರ್ವಹಿಸುತ್ತಿರುವವರು ನೀರಿಗೆ ಹಣ ಪಡೆಯುತ್ತಾರೆ. ಆದ್ದರಿಂದ, ವಿದ್ಯುತ್ ಬಿಲ್ ಕಟ್ಟಬೇಕು. ಹಣ ಕಟ್ಟಿದ ಕೂಡಲೇ ಸಂಪರ್ಕ ಕೊಡುತ್ತೇವೆ’ ಎಂದು ಬೆಸ್ಕಾಂ ಸಹಾಯಕ ಎಂಜಿನಿಯರ್‌ ಹನುಮಂತರಾಜು ತಿಳಿಸಿದರು.

ADVERTISEMENT

ವಾಟರ್‌ ಲೈಫ್ ಇಂಡಿಯಾದ ಅಧಿಕಾರಿ ಶಿವಕುಮಾರ್, ’ಕೆಲ ದಿನಗಳಲ್ಲಿ ವಿದ್ಯುತ್ ಬಾಕಿ ಪಾವತಿಸಿ, ಘಟಕದಿಂದ ಗ್ರಾಮಸ್ಥರಿಗೆ ನೀರು ದೊರೆಯುವಂತೆ ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.