ADVERTISEMENT

ಬೆಂಗಳೂರು: ಮುಕ್ತ ಸಂಚಾರಕ್ಕೆ ಎಲಿವೇಟೆಡ್‌ ರೋಟರಿ ಮೇಲ್ಸೇತುವೆ

ಬೈಯಪ್ಪನಹಳ್ಳಿ–ಹಳೆ ಮದ್ರಾಸ್‌ ರಸ್ತೆ ಸುತ್ತಮುತ್ತ ಸುಗಮ ಸಂಚಾರಕ್ಕೆ ಬಿ–ಸ್ಮೈಲ್‌ ಯೋಜನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 16:19 IST
Last Updated 26 ಸೆಪ್ಟೆಂಬರ್ 2025, 16:19 IST
   

ಬೆಂಗಳೂರು: ಹಳೆ ಮದ್ರಾಸ್‌ ರಸ್ತೆ, ಬೈಯಪ್ಪನಹಳ್ಳಿ, ಬಾಣಸವಾಡಿ ಸುತ್ತಮುತ್ತ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಬೆಂಗಳೂರು ಸ್ಮಾರ್ಟ್‌ ಇನ್‌ಫ್ರಾಸ್ಟ್ರಕ್ಚರ್‌ ನಿಯಮಿತ (ಬಿ–ಸ್ಮೈಲ್‌) ₹380 ಕೋಟಿ ವೆಚ್ಚದ ಎಲಿವೇಟೆಡ್‌ ರೋಟರಿ ಫ್ಲೈಓವರ್‌ ನಿರ್ಮಿಸಲು ಮುಂದಾಗಿದೆ.

2024ರ ಫೆಬ್ರುವರಿಯಲ್ಲೇ ಈ ಯೋಜನೆಯನ್ನು ತಯಾರಿಸಲಾಗಿದ್ದು,  ಬಿ–ಸ್ಮೈಲ್‌ ಮೂಲಕ ಅನುಷ್ಠಾನಗೊಳಿಸಲು ಟೆಂಡರ್‌ ಆಹ್ವಾನಿಸಲಾಗಿದೆ. ಅಕ್ಟೋಬರ್‌ 13ರವರೆಗೆ ಬಿಡ್‌ ಸಲ್ಲಿಸಲು ಅವಕಾಶ ನೀಡಲಾಗಿದ್ದು, 24 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

‘ಟರ್ನ್‌ ಕೀ ಲಮ್‌ಸಮ್‌’ ನಿಗದಿಪಡಿಸಿದ ದರಕ್ಕೇ ಯೋಜನೆಯನ್ನು ಪೂರ್ಣಗೊಳಿಸುವ ಮಾದರಿಯ ಟೆಂಡರ್‌ ಇದಾಗಿದೆ. ಜಿಎಸ್‌ಟಿ ಹೊರತುಪಡಿಸಿ, ₹304 ಕೋಟಿಯ ವೆಚ್ಚಕ್ಕೆ ಟೆಂಡರ್‌ ಆಹ್ವಾನಿಸಲಾಗಿದೆ. ಯೋಜನೆಯಿಂದ ಹೆಚ್ಚು ಪ್ರಯೋಜನ ಪಡೆಯುವ ರೈಲ್ವೆ ಇಲಾಖೆ, ಯೋಜನೆಗೆ ಅಗತ್ಯವಿರುವ ಭೂಮಿಯನ್ನು ನೀಡಲು ಈಗಾಗಲೇ ಒಪ್ಪಿದೆ. ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳನ್ನು (ಟಿಡಿಆರ್) ನೀಡುವ ಮೂಲಕ  ಖಾಸಗಿ ಭೂಮಿಯನ್ನು ಯೋಜನೆಗೆ ಸ್ವಾಧೀನಪಡಿಕೊಳ್ಳಲು ನಿರ್ಧರಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.