–ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ಆವರಣದೊಳಗೆ ಇದ್ದ ಜನೌಷಧ ಕೇಂದ್ರಗಳನ್ನು ರದ್ದು ಪಡಿಸಿರುವುದು ಸರಿಯಾದ ಕ್ರಮ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧ ಯಾವಾಗಲೂ ಲಭ್ಯ ಇರುವಂತೆ ಮಾಡಬೇಕು ಎಂದು ಸಾರ್ವತ್ರಿಕ ಆರೋಗ್ಯ ಆಂದೋಲನ– ಕರ್ನಾಟಕ (ಎಸ್‌ಎಎ–ಕೆ) ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಆಂದೋಲನದ ರಾಜೇಶ್ ಮತ್ತು ಪ್ರಸನ್ನ ಅವರು ಮಾತನಾಡಿ, ‘ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಖಾಸಗಿ ಮಳಿಗೆಗಳಿಗೆ ಅವಕಾಶ ಇರಬಾರದು. ಅದಕ್ಕಾಗಿ ಎರಡು ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದ್ದೆವು. ಇದೀಗ ಆರೋಗ್ಯ ಸಚಿವರು ಕ್ರಮ ಕೈಗೊಂಡಿದ್ದಾರೆ. ಇಷ್ಟಕ್ಕೆ ನಿಂತರೆ ಪ್ರಯೋಜನವಿಲ್ಲ. ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧ ಸಿಗದೇ ಜನರು ಪರದಾಡುವಂತಾಗಬಾರದು’ ಎಂದು ಹೇಳಿದರು.
ಖರೀದಿಸಿದ ಪ್ರತಿ ಔಷಧದ ಗುಣಮಟ್ಟವನ್ನು ಪರೀಕ್ಷಿಸಬೇಕು. ಔಷಧ ಖರೀದಿಯ ಪ್ರಮಾಣ, ದಾಸ್ತಾನು ನಿರ್ಧರಿಸಲು ತಂತ್ರಜ್ಞಾನ ಬಳಸಬೇಕು ಎಂದು ಆಗ್ರಹಿಸಿದರು. ಆಂದೋಲನದ ರಿತಾಶ್, ಬೇಬಿ, ಸೌಮ್ಯಾ ಕೆ.ಆರ್. ನಿಶಾ, ಭೂದೇವಿ, ಆಶಾ ಕೀಲಾರ ಸುದ್ದಿಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.