ADVERTISEMENT

ಪರಿಸರ ಸಾಹಿತ್ಯ ಕ್ಷೇತ್ರವೂ ವಿಸ್ತರಿಸಲಿ: ಶಾಸಕ ಬೈರತಿ ಬಸವರಾಜ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2025, 23:30 IST
Last Updated 15 ಮಾರ್ಚ್ 2025, 23:30 IST
ಶಾಸಕ ಬೈರತಿ ಬಸವರಾಜ ಅವರು 'ಮಿಡಿದ ಮರಗಳು' ಪುಸ್ತಕ ಲೋಕಾರ್ಪಣೆ ಮಾಡಿದರು.  
ಶಾಸಕ ಬೈರತಿ ಬಸವರಾಜ ಅವರು 'ಮಿಡಿದ ಮರಗಳು' ಪುಸ್ತಕ ಲೋಕಾರ್ಪಣೆ ಮಾಡಿದರು.     

ಕೆ.ಆರ್.ಪುರ: ‘ಪರಿಸರ ಸಂರಕ್ಷಣೆ ಜೊತೆಗೆ ಪರಿಸರ ಸಾಹಿತ್ಯ ಕ್ಷೇತ್ರವೂ ವಿಸ್ತರಿಸಲಿ’ ಎಂದು ಶಾಸಕ ಬೈರತಿ ಬಸವರಾಜ ಆಶಿಸಿದರು.

ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಿಡಿತ ಫೌಂಡೇಶನ್ ಸಹಯೋಗದಲ್ಲಿ ಏರ್ಪಡಿಸಿದ್ದ ಲೇಖಕ ಪರಿಸರ ಮಂಜು ಅವರ ಮೂರನೇ ಕೃತಿ ‘ಮಿಡಿದ ಮರಗಳು’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

‘ಬೆಂಗಳೂರಿನಲ್ಲಿ ಪರಿಸರ ಸಂರಕ್ಷಣೆ ಬಹಳ ಮುಖ್ಯ. ಅಭಿವೃದ್ಧಿಗಾಗಿ ಮರ ಕಡಿಯುವುದು ಅನಿವಾರ್ಯ. ಮರ ಕಡಿದರೆ ಪ್ರತಿಯಾಗಿ ಹನ್ನೊಂದು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ADVERTISEMENT

ಸಾಹಿತಿ ಪರಿಸರ ಮಂಜು ಅವರು, ಅನಧಿಕೃತವಾಗಿ ಮರಗಳನ್ನು ಕಡಿದವರಿಗೆ ತಕ್ಕ ಶಿಕ್ಷೆಯಾಗಬೇಕು. ಮರ ಸಂರಕ್ಷಣೆ ಕಾಯ್ದೆ ಬಲಿಷ್ಠವಾಗಬೇಕು’ ಎಂದು ಅಭಿಪ್ರಾಯಪಟ್ಟರು. 501 ಔಷಧೀಯ ಗಿಡ ವಿತರಿಸಲಾಯಿತು.

ಮಾಜಿ ಪಾಲಿಕೆ ಸದಸ್ಯ ಪಿ.ಜೆ.ಅಂತೋಣಿಸ್ವಾಮಿ, ಮುಖಂಡರಾದ ಶಿವಪ್ಪ, ಭಾಗ್ಯಮ್ಮ, ಎಂ.ಆರ್.ವೆಂಕಟೇಶ್, ವಿಕ್ರಮ್, ಪಟಾಕಿ ರವಿ, ಗಂಧರ್ವ ರಮೇಶ್, ಉಪೇಂದ್ರಕುಮಾರ್, ಮಿಡಿತ ಫೌಂಡೇಶನ್ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.