ADVERTISEMENT

ಹೆಬ್ಬಾಳ ಮೇಲ್ಸೇತುವೆ ಬಳಿಯ ಜಾಹೀರಾತು ತೆರವಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 2:13 IST
Last Updated 23 ಸೆಪ್ಟೆಂಬರ್ 2020, 2:13 IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಹೋರ್ಡಿಂಗ್‌ ಅಳವಡಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಆದರೂ, ಹೆಬ್ಬಾಳ ಮೇಲ್ಸೇತುವೆ ಬಳಿ ಅವಿನಾಶ್‌ ಆ್ಯಡ್ಸ್‌ ಸಂಸ್ಥೆಯು ಹೋರ್ಡಿಂಗ್‌ ಅಳವಡಿಸಿದೆ. ಇದನ್ನು ತೆರವುಗೊಳಿಸಬೇಕು ಎಂದು ನಿವೃತ್ತ ಕೆಎಎಸ್‌ ಅಧಿಕಾರಿ ಕೆ.ಮಥಾಯಿ ಒತ್ತಾಯಿಸಿದ್ದಾರೆ.

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಪತ್ರ ಬರೆದಿರುವ ಮಥಾಯಿ, ‘ಹೋರ್ಡಿಂಗ್‌ ಅಳವಡಿಸಲು ಅನುಮತಿ ನೀಡುವ ಅಧಿಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಇಲ್ಲ. ಆದರೂ ಖಾಸಗಿ ಸಹಭಾಗಿತ್ವದ ಕಾಮಗಾರಿ (ಪಿಪಿಪಿ) ಎಂಬ ನೆಲೆಯಲ್ಲಿ ಈ ಮೇಲ್ಸೇತುವೆ ಬಳಿ ಹೋರ್ಡಿಂಗ್‌ ಅಳವಡಿಕೆಗೆ ಅವಕಾಶ ನೀಡಿರುವುದು ತಪ್ಪು’ ಎಂದು ತಿಳಿಸಿದ್ದಾರೆ.

‘ಇದನ್ನು ತೆರವುಗೊಳಿಸದ ಬಿಬಿಎಂಪಿ ಅಧಿಕಾರಿಗಳೂ ಜಾಹೀರಾತು ಮಾಫಿಯಾದವರ ಜೊತೆ ಕೈಜೋಡಿಸಿದ್ದಾರೆ ಎಂಬುದು ಸ್ಪಷ್ಟ ಈ ಫಲಕ ಅಳವಡಿಕೆಗೆ ಅವಕಾಶ ಕಲ್ಪಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.