ADVERTISEMENT

ಬೆಂಗಳೂರು: ಹೋಟೆಲ್‌ ಸಿಬ್ಬಂದಿ ಬ್ಯಾಗ್‌ನಲ್ಲಿ ಸ್ಪೋಟಕ ಮಾದರಿಯ ವಸ್ತುಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 23:30 IST
Last Updated 21 ಮಾರ್ಚ್ 2025, 23:30 IST
   

ಬೆಂಗಳೂರು: ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯ ಬೆಳ್ಳಹಳ್ಳಿಯ ಹೋಟೆಲ್‌ ಸಿಬ್ಬಂದಿ ಬ್ಯಾಗ್‌ನಲ್ಲಿ ಸ್ಫೋಟಕ ಮಾದರಿಯ ವಸ್ತುಗಳು ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಬ್ದುಲ್ ರೆಹಮಾನ್ ಅವರ ಬ್ಯಾಗ್‌ನಲ್ಲಿ ಪತ್ತೆಯಾದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

‘ಬೆಳ್ಳಹಳ್ಳಿಯ ನಿವಾಸಿ ಎಂದು ಹೇಳಿಕೊಂಡಿರುವ ಅಬ್ದುಲ್ ಹೋಟೆಲ್‌ನಲ್ಲಿ ಮೂರು ದಿನದ ಹಿಂದೆಯಷ್ಟೇ​ ಕೆಲಸಕ್ಕೆ ಸೇರಿ ಕೊಂಡಿದ್ದ. ಬಳಿಕ ಹೋಟೆಲ್​ ಮಾಲೀಕರು, ಆತನ ಆಧಾರ್ ಕಾರ್ಡ್ ಕೇಳಿದ್ದರು. ಆದರೆ, ಆತ ಕೊಟ್ಟಿರಲಿಲ್ಲ. ಇದರಿಂದ ಅನುಮಾನಗೊಂಡು, ಶೆಡ್​​ನಲ್ಲಿದ್ದ ರೆಹಮಾನ್​​ನ ಬ್ಯಾಗ್ ಪರಿಶೀಲಿಸಿದಾಗ ಸ್ಪೋಟಕ ಮಾದರಿಯ ವಸ್ತುಗಳು ಪತ್ತೆಯಾಗಿವೆ‘ ಎಂದು ಹೇಳಿದ್ದಾರೆ.

ADVERTISEMENT

‘ರಸ್ತೆ ಬದಿ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸುವ ವೇಳೆ ಸಿಕ್ಕ ಈ ವಸ್ತುವನ್ನೂ ಬ್ಲಾಗ್‌ನಲ್ಲಿಟ್ಟುಕೊಂಡಿದ್ದೆ ಎಂದು ವಿಚಾರಣೆ ವೇಳೆ ರೆಹಮಾನ್ ಹೇಳಿದ್ದಾನೆ. ಟೆನಿಸ್‌ ಬಾಲ್ ಗಾತ್ರದ ವಸ್ತುವಿನಿಂದ ಬತ್ತಿಗಳು ಹೊರ ಬಂದಿದ್ದು, ಅದರಲ್ಲಿದ್ದ ರಾಸಾಯನಿಕವನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಆರೋಪಿ ಬಳಿ ಮೊಬೈಲ್ ಇಲ್ಲ. ಇದುವರೆಗೂ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿಲ್ಲ’ ಎಂದು ಪೂರ್ವ ವಿಭಾಗ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.