ADVERTISEMENT

ಬಡ್ಡಿರಹಿತ ಪಾವತಿಗೆ ಡಿ.31ರವರೆಗೆ ಅವಕಾಶ: ಬಿಡಿಎ

ಹಣ ಬಾಕಿ ಉಳಿಸಿಕೊಂಡಿರುವ ಫ್ಲ್ಯಾಟ್ ಖರೀದಿದಾರರು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 4:05 IST
Last Updated 21 ಅಕ್ಟೋಬರ್ 2020, 4:05 IST

ಬೆಂಗಳೂರು: ವಸತಿ ಸಮುಚ್ಚಯಗಳಲ್ಲಿ ಫ್ಲ್ಯಾಟ್‌ ಖರೀದಿಸಿ, ಅದರ ಹಣ ಬಾಕಿ ಉಳಿಸಿಕೊಂಡವರು 2020ರ ಡಿ.31ರ ಒಳಗೆ ಬಡ್ಡಿರಹಿತವಾಗಿ ಪೂರ್ಣ ಮೌಲ್ಯ ಪಾವತಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅವಕಾಶ ನೀಡಿದೆ.

ಬಿಡಿಎ ವಿವಿಧೆಡೆ ನಿರ್ಮಿಸಿರುವ ವಸತಿ ಸಮುಚ್ಚಯಗಳಲ್ಲಿ ವಸತಿ ಖರೀದಿಸಿರುವ ಅನೇಕರು ಭಾಗಶಃ ಮೊತ್ತ ಪಾವತಿಸಿ ಹಂಚಿಕೆ ಪತ್ರ ಪಡೆದಿದ್ದಾರೆ. ಬಿಡಿಎ ನೋಟಿಸ್‌ಗಳನ್ನು ನೀಡಿದ ಬಳಿಕವೂ ಬಾಕಿ ಮೊತ್ತ ಪಾವತಿಸಿಲ್ಲ.

ಫ್ಲ್ಯಾಟ್‌ನ ಪೂರ್ಣ ಮೌಲ್ಯವನ್ನು ನಿಗದಿತ ಅವಧಿಯೊಳಗೆ ಪಾವತಿಸದಿದ್ದರೆ ಬಿಡಿಎ ಬಡ್ಡಿಯನ್ನು ವಿಧಿಸುತ್ತದೆ. ಆದರೆ, ಫ್ಲ್ಯಾಟ್‌ ಖರೀದಿಸಿದವರುಈ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ. ಬಡ್ಡಿರಹಿತವಾಗಿ ಹಣ ಪಾವತಿಸಲು ಅವಕಾಶ ಕಲ್ಪಿಸುವ ಬಗ್ಗೆ ಬಿಡಿಎ ಆ.28 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನವನ್ನು ಕೈಗೊಂಡಿತ್ತು.

ADVERTISEMENT

‘ಡಿ. 31ರ ಒಳಗೂ ಬಾಕಿ ಹಣ ಪಾವತಿ ಮಾಡದಿದ್ದರೆ ಯಾವುದೇ ಮುನ್ಸೂಚನೆ ನೀಡದೆ ಫ್ಲ್ಯಾಟ್‌ ಹಂಚಿಕೆ ಯನ್ನು ಏಕಪಕ್ಷೀಯವಾಗಿ ರದ್ದುಪಡಿಸಲಾಗುತ್ತದೆ’ ಎಂದು ಬಿಡಿಎ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.