ಬೆಂಗಳೂರು: ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಸೋಂಕಿನಿಂದ ರಕ್ಷಣೆ ಪಡೆಯಲು ‘ಫೇಸ್‌ಶೀಲ್ಡ್’ ಎಂಬ ರಕ್ಷಣಾ ಕವಚವನ್ನುದಯಾನಂದ್ ಸಾಗರ್ ವಿಶ್ವವಿದ್ಯಾಲಯದ (ಡಿಎಸ್‌ಯು) ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ್ದಾರೆ.
ಕೋವಿಡ್–19 ವೈರಾಣು ಕಣ್ಣು, ಮೂಗು ಮತ್ತು ಬಾಯಿ ಪ್ರವೇಶಿಸದಂತೆ ತಡೆಯುವ ಸಾಮರ್ಥ್ಯ ಹೊಂದಿದೆ.ಸೋಂಕು ತಡೆಯಲು ಉಪಯೋಗಿಸುತ್ತಿರುವ ಮಾಸ್ಕ್‌ಗಿಂತಲೂಫೇಸ್‌ಶೀಲ್ಡ್ ಹೆಚ್ಚು ಸುರಕ್ಷಿತವಾಗಿದೆ. ಉಸಿರಾಡಲು ಕಷ್ಟವಾಗುವುದಿಲ್ಲಎನ್ನುತ್ತಾರೆ ವಿನ್ಯಾಸಕರು.
ವೈದ್ಯಕೀಯ ಸಿಬ್ಬಂದಿ ಮಾತ್ರವಲ್ಲ ಜನಸಾಮಾನ್ಯರು ಕೂಡ ಮಾಸ್ಕ್ ಬದಲು ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಈಫೇಸ್‌ಶೀಲ್ಡ್ ಬಳಸಬಹುದು.ಈಗಾಗಲೇಮಾರ್ಚ್ 28ರಂದು ಪ್ರಯೋಗಾಲಯದಿಂದ ಮೊದಲ ಉತ್ಪನ್ನ ಹೊರಬಂದಿದ್ದು, ಪ್ರಾಯೋಗಿಕವಾಗಿ ಉಪಯೋಗಿಸಲಾಗುತ್ತಿದೆ.
ಡಿಎಸ್‌ಯುನ ಇನೊವೇಶನ್ ಲ್ಯಾಬ್‌ನಲ್ಲಿ ಆಟೊಡೆಸ್ಕ್ ಡಿಸೈನ್ ಮತ್ತು ಇನೊವೇಶನ್ ಸೆಂಟರ್ ತಜ್ಞರು ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಈಗಾಗಲೇ ಫೇಸ್‌ಶೀಲ್ಡ್ 3ಡಿ ಮುದ್ರಣ ಮಾದರಿಯನ್ನು ಮೌಲ್ಯಮಾಪನಕ್ಕಾಗಿ ವೈದ್ಯರಿಗೆ ನೀಡಲಾಗಿದೆ. ಅವರ ಸಲಹೆ, ಸೂಚನೆ ಆಧರಿಸಿಸೂಕ್ತ ಮಾರ್ಪಾಡು ಮಾಡಲು ತಂಡ ನಿರ್ಧರಿಸಿದೆ.
‘ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅನುಮೋದನೆಗಾಗಿ ಕಾಯುತ್ತಿದ್ದು, ಅನುಮೋದನೆ ದೊರೆತರೆ ಸಾಮೂಹಿಕ ಉತ್ಪಾದನೆಗೆ ತಂತ್ರಜ್ಞಾನ ಹಂಚಿಕೊಳ್ಳಲಾಗುವುದು’ ಎಂದು ಆಟೊಡೆಸ್ಕ್ ವಿನ್ಯಾಸ ಮತ್ತು ಇನೊವೇಶನ್ ಕೇಂದ್ರದ ವ್ಯವಸ್ಥಾಪಕ ವಿನಾಯಕ ಕೆ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಕೊರೊನಾ ತಡೆಯಲು ಜನಸಾಮಾನ್ಯರ ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಚನೆ ಕೂಡ ಇದೆ ಎಂದರು.
ಡಿಎಸ್‌ಯು ಏರೊಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಸೂರ್ಯನಾರಾಯಣ ಹಾಗೂ ಆಟೊಮೊಬೈಲ್ ಎಂಜಿನಿಯರಿಂಗ್ ವಿದ್ಯಾರ್ಥಿಅಜೇಯ್ ಪಿ. ಈ ಸಾಧನದ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದಾರೆ.
ಡಿಟ್ಯಾಚೆಬಲ್ ಆಗಿದ್ದು, ಬಳಸುವುದು ಸುಲಭ
ಫ್ಯೂಸ್ಟ್ ಡಿಪಾಸಿಷನ್ ಮಾಡೆಲಿಂಗ್ (ಎಫ್‌ಡಿಎಂ) ಎಂಬ 3ಡಿ ತಂತ್ರಜ್ಞಾನದ ನೆರವಿನಿಂದ ಥರ್ಮೋಪ್ಲಾಸ್ಟಿಕ್ ಮತ್ತುಪಾಲಿಲ್ಯಾಕ್ಟಿಕ್ ಆ್ಯಸಿಡ್ (ಪಿಎಲ್‌ಎ) ರಾಸಾಯನಿಕ ವಸ್ತುಗಳನ್ನು ಬಳಸಿಫೇಸ್‌ಶೀಲ್ಡ್ ಫೈಬರ್ ಗಾಜು ಮತ್ತು ಹೆಡ್‌ಗೇರ್ ತಯಾರಿಸಲಾಗಿದೆ.
ಇದು ಸಂಪೂರ್ಣ ಡಿಟ್ಯಾಚೆಬಲ್ ಆಗಿದ್ದು, ಬಳಕೆಯ ನಂತರ ಹೆಡ್‌ಗೇರ್‌ಗೆ ಅಳವಡಿಸಬಹುದಾದ ಪಾರದರ್ಶಕಫೈಬರ್ ಗಾಜುಗಳನ್ನು ಸುಲಭವಾಗಿ ಬದಲಾಯಿಸಬಹುದು.
ಗಲಭೆ ನಿಯಂತ್ರಿಸುವಾಗ ಪೊಲೀಸರು ಕಲ್ಲೇಟು ಮತ್ತು ಅಶ್ರುವಾಯುವಿನಿಂದ ಮುಖವನ್ನು ರಕ್ಷಿಸಿಕೊಳ್ಳಲು ಹೆಲ್ಮೆಟ್ ಜೊತೆ ಬಳಸುವ ಪಾರದರ್ಶಕ ಗಾಜಿನಂತೆಯೇ ಇದು ಕಾಣುತ್ತದೆ.
ಮುಂದೆಲೆಗೆ ಸುಲಭವಾಗಿ ಸಿಕ್ಕಿಸಿಕೊಳ್ಳಬಹುದಾದ (ಹೇರ್‌ಬ್ಯಾಂಡ್) ಹೆಡ್‌ಗೇರ್‌ಗೆ ಪಾರದರ್ಶಕ ಮತ್ತು ಹಗುರವಾದ ಫೈಬರ್ ಗಾಜು ಅಳವಡಿಸಲಾಗಿದೆ. ಈ ಗಾಜುಗಳನ್ನು ಬೇಕಾದಾಗ ಬದಲಾಯಿಸಬಹುದು. ಇದನ್ನು ಬಳಸುವುದು ಕೂಡ ಅತ್ಯಂತ ಸರಳ ಮತ್ತು ಸುಲಭ.
***
ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುವ ವೇಳೆ ಸೋಂಕು ತಗುಲುವ ಅಪಾಯ ಎದುರಿಸುವ ವೈದ್ಯಕೀಯ ಸಿಬ್ಬಂದಿಗಾಗಿ ಈ ಸಾಧನ ತಯಾರಿಸಲಾಗಿದೆ.
- ವಿನಾಯಕ ಕೆ., ಡಿಎಸ್‌ಯು
***
ಸೋಂಕು ಹರಡುವುದನ್ನು ನಿಯಂತ್ರಿಸಲು ಸಾಧ್ಯವಿರುವ ಎಲ್ಲ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಈ ಫೇಸ್‌ಶೀಲ್ಡ್ ಅಭಿವೃದ್ಧಿಪಡಿಸಲಾಗಿದೆ.
-ಡಾ. ಸೂರ್ಯನಾರಾಯಣ, ಡಿಎಸ್‌ಯು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.