ಪೊಲೀಸ್
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿವಣ್ಣನ್ ಅವರ ಹೆಸರು, ಫೋಟೊ ಬಳಸಿ ನಾಲ್ಕಕ್ಕೂ ಹೆಚ್ಚು ನಕಲಿ ಖಾತೆಯನ್ನು ವಂಚಕರು ತೆರೆದಿದ್ದಾರೆ. ಈ ಖಾತೆಗಳಿಂದ ಮಣಿವಣ್ಣನ್ ಆಪ್ತರಿಗೆ, ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದಾರೆ. ‘ನನ್ನ ಸ್ನೇಹಿತರು ಸಿ.ಆರ್.ಪಿ.ಎಫ್‌ನಲ್ಲಿ ಕೆಲಸ ಮಾಡುತ್ತಿದ್ದು, ಅವರ ವರ್ಗಾವಣೆ ಆಗುತ್ತಿದೆ. ಹೀಗಾಗಿ ಅವರ ಮನೆಯ ಫರ್ನಿಚರ್ ಮಾರಾಟ ಮಾಡಬೇಕೆಂದಿದ್ದಾರೆ. ಬೇಕಾದರೆ ಖರೀದಿಸಬಹುದು’ ಎಂಬ ಸಂದೇಶಗಳನ್ನು ಸೈಬರ್ ವಂಚಕರು ಕಳುಹಿಸಿದ್ದಾರೆ.
‘ನಿಮ್ಮ ನಂಬರ್ ಕಳುಹಿಸಿ ನನ್ನ ಸ್ನೇಹಿತರೇ ನಿಮಗೆ ಕರೆ ಮಾಡುತ್ತಾರೆ’ ಎಂದು ನಂಬಿಸಿ ಇಬ್ಬರು ವ್ಯಕ್ತಿಗಳಿಗೆ ವಂಚಿಸಿದ್ದಾರೆ ಎನ್ನಲಾಗಿದೆ. ಈ ನಕಲಿ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.