ರಾಜರಾಜೇಶ್ವರಿನಗರ: ರಾಗಿ ಖರೀದಿಗಾಗಿಉಗ್ರಾಣಕ್ಕೆ ಕರೆಯಿಸಿ ದಿನವಿಡೀ ಕಾಯುವಂತೆ ಮಾಡಿಯೂ ರಾಗಿ ಖರೀದಿಸದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ನಾಗದೇವನಹಳ್ಳಿಯ ರಾಗಿ ಖರೀದಿ ಕೇಂದ್ರದ ಸಮೀಪದ ಹೊರವರ್ತುಲ ರಸ್ತೆಗೆ ಅಡ್ಡಲಾಗಿ ರಾಗಿ ತುಂಬಿಕೊಂಡು ತರಲಾಗಿದ್ದ ಲಾರಿ, ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
‘ಭಾನುವಾರ ರಾತ್ರಿ 8ಕ್ಕೆ ಬಂದು, ಸೋಮವಾರ ಸಂಜೆ 5ಗಂಟೆಯಾದರೂ ರಾಗಿ ಖರೀದಿಸಲಿಲ್ಲ. ಆಳುಗಳಿಲ್ಲವೆಂದು ಸಬೂಬು ಹೇಳಿದರು’ ಎಂದುರೈತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.