ADVERTISEMENT

ಅನುಮತಿ ಪಡೆಯದೆ ಮಕ್ಕಳ ದಾಖಲಾತಿ: ಖಾಸಗಿ ಶಾಲೆ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 5:45 IST
Last Updated 14 ಜುಲೈ 2022, 5:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಶಿಕ್ಷಣ ಇಲಾಖೆಯ ಅನುಮತಿ ಪಡೆಯದೆ ಮಕ್ಕಳನ್ನು ದಾಖಲಿಸಿಕೊಂಡ ಮಾಗಡಿ ರಸ್ತೆ ಗೊಲ್ಲರ ಪಾಳ್ಯ–ಹೊಸಳ್ಳಿಯ ಆರ್ಕಿಡ್ಸ್‌ ಇಂಟರ್‌ ನ್ಯಾಷನಲ್ ಶಾಲೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಅನಧಿಕೃತವಾಗಿ ಶಾಲೆ ತೆರೆದು ಪೂರ್ವ ಪ್ರಾಥಮಿಕ ಶಾಲೆಯಿಂದ 7ನೇ ತರಗತಿವರೆಗೆ ಮಕ್ಕಳಿಗೆ ಪ್ರವೇಶ ನೀಡಲಾಗಿದೆ. ಇಲಾಖೆಯ ಆದೇಶಗಳನ್ನು ಧಿಕ್ಕರಿಸಲಾಗಿದೆ. ಹಾಗಾಗಿ, ಶಾಲೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಸೂಚಿಸಿದ್ದಾರೆ ಎಂದು ರಾಜಾಜಿನಗರ ಬಿಇಒ ರಮೇಶ್‌ಬ್ಯಾಡರಹಳ್ಳಿ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT