ADVERTISEMENT

ಫಿಟ್‌ ಇಂಡಿಯಾ ಸೈಕಲ್ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 22:05 IST
Last Updated 18 ಜನವರಿ 2020, 22:05 IST
ಕೆ.ಆರ್‌.ವೇಣುಗೋಪಾಲ್ ಅವರು ಸೈಕಲ್‌ ತುಳಿಯುವ ಮೂಲಕ ರ್‍ಯಾಲಿಗೆ ಚಾಲನೆ ನೀಡಿದರು. ಕುಲಸಚಿವ ಬಿ.ಕೆ.ರವಿ, ಎನ್‌.ಸತೀಶಗೌಡ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಇದ್ದರು.
ಕೆ.ಆರ್‌.ವೇಣುಗೋಪಾಲ್ ಅವರು ಸೈಕಲ್‌ ತುಳಿಯುವ ಮೂಲಕ ರ್‍ಯಾಲಿಗೆ ಚಾಲನೆ ನೀಡಿದರು. ಕುಲಸಚಿವ ಬಿ.ಕೆ.ರವಿ, ಎನ್‌.ಸತೀಶಗೌಡ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಇದ್ದರು.   

ಬೆಂಗಳೂರು: ‘ಬೃಹದಾಕಾರವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಸೈಕಲ್ ಬಳಕೆಯಿಂದ ಮಾಲಿನ್ಯ ತಡೆಗಟ್ಟಬಹುದು. ಉತ್ತಮ ಆರೋಗ್ಯ ಹಾಗೂ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಸೈಕಲ್‌ ಬಳಕೆಯ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್‌.ವೇಣುಗೋಪಾಲ್‌ ಹೇಳಿದರು

ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ‘ಫಿಟ್‌ ಇಂಡಿಯಾ ಸೈಕಲ್ ರ್‍ಯಾಲಿ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಎನ್‌.ಸತೀಶ ಗೌಡ, ‘ದೇಶದ ಅಭಿವೃದ್ಧಿ ಯುವಕರಿಂದ ಸಾಧ್ಯ.ಸೈಕಲ್‌ ಬಳಕೆ ಆರೋಗ್ಯಕರ ಸಮಾಜಕ್ಕೆ ಮಹತ್ತರ ಕೊಡುಗೆಯಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.