ADVERTISEMENT

ಬೆಂಗಳೂರಿನಲ್ಲಿ ಐದು ಹೆಣ್ಣುಮಕ್ಕಳ ಜನನ: ತಲಾ ₹5 ಲಕ್ಷ ಠೇವಣಿ ಇಡುತ್ತೆ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 8:57 IST
Last Updated 1 ಜನವರಿ 2019, 8:57 IST
   

ಬೆಂಗಳೂರು:ಹೊಸ ವರ್ಷದ ಮೊದಲ ದಿನ ನಗರದ ವಿವಿಧೆಡೆ ಇರುವ ಬಿಬಿಎಂಪಿ ಆಸ್ಪತ್ರೆಗಳಲ್ಲಿಒಟ್ಟು ಐದು ಹೆಣ್ಣುಮಕ್ಕಳು (ಪಿಂಕ್‌ ಬೇಬಿ) ಜನಿಸಿವೆ. ಈ ಮಕ್ಕಳ ವಿದ್ಯಾಭ್ಯಾಸಕ್ಕಾಗಿಬಿಬಿಎಂಪಿ ತಲಾ ₹ 5 ಲಕ್ಷ ಠೇವಣಿ ಇಡಲಿದೆ.

ಜ.1ರಂದು ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆ ಮೂಲಕ ಜನಿಸುವಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ವೈದ್ಯಾಧಿಕಾರಿ ಹಾಗೂ ಮಗುವಿನ ತಾಯಿಯ ಹೆಸರಿನಲ್ಲಿ ₹ 5 ಲಕ್ಷ ಠೇವಣಿ ಇಡುವ ಯೋಜನೆಯನ್ನು ಬಿಬಿಎಂಪಿ ಕಳೆದ ಬಜೆಟ್‌ನಲ್ಲಿ ಪ್ರಕಟಿಸಿತ್ತು.ಈ ಉದ್ದೇಶಕ್ಕಾಗಿ ಬಜೆಟ್‌ನಲ್ಲಿ ₹1.20 ಕೋಟಿ ಮೀಸಲಿಟ್ಟಿತ್ತು.

ನಗರದ ತಾವರೆಕೆರೆ, ಗಂಗಾನಗರ, ನಂದಿನಿ ಲೇಔಟ್, ತಿಮ್ಮಯ್ಯ ರಸ್ತೆ ಹೆರಿಗೆ ಆಸ್ಪತ್ರೆ, ರಾಜಾಜಿನಗರ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಇಂದು ಒಟ್ಟು ಐದು ಹೆಣ್ಣುಮಕ್ಕಳು ಜನಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.