ADVERTISEMENT

ಲಾಲ್‌ಬಾಗ್‌: ಇಂದಿನಿಂದ ಫಲಪುಷ್ಪ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 19:30 IST
Last Updated 17 ಜನವರಿ 2019, 19:30 IST
ಫಲಪುಷ್ಪ ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಯಾದ ಸಬರಮತಿ ಆಶ್ರಮದ ಪ್ರತಿಕೃತಿಯನ್ನು ಗುಲಾಬಿ ಹೂಗಳಿಂದ ಅಲಂಕಾರಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕ - -–ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್.ಪಿ.ಎಸ್
ಫಲಪುಷ್ಪ ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಯಾದ ಸಬರಮತಿ ಆಶ್ರಮದ ಪ್ರತಿಕೃತಿಯನ್ನು ಗುಲಾಬಿ ಹೂಗಳಿಂದ ಅಲಂಕಾರಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕ - -–ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್.ಪಿ.ಎಸ್   

ಬೆಂಗಳೂರು: ತೋಟಗಾರಿಕೆ ಇಲಾಖೆ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ (ಜ.18ರಂದು) ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

ಜ.27ರವರೆಗೆ ಸಾರ್ವಜನಿಕರಿಗೆ ಫಲಪುಷ್ಪ ಪ್ರದರ್ಶನ ಇರಲಿದೆ.

ಸಹಸ್ರಾರು ಹೂಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಬದುಕಿನ ಪ್ರಮುಖ ಘಟನೆಗಳು ತೆರೆದುಕೊಳ್ಳ
ಲಿವೆ. ಪ್ರದರ್ಶನಕ್ಕೆ ಭೇಟಿ ನೀಡುವ ಸಸ್ಯ ಪ್ರೇಮಿಗಳಿಗೆ ಮತ್ತು ತೋಟಗಾರಿಕೆ ಆಸಕ್ತರಿಗಾಗಿ ಔಷಧಿ, ಆಲಂಕಾರಿಕ ಸಸ್ಯಗಳು ಹಾಗೂ ಬೊನ್ಸಾಯ್ ಗಿಡಗಳು, ತೋಟಗಾರಿಕೆ ಸಲಕರಣೆಗಳು ದೊರೆಯುತ್ತವೆ.

ADVERTISEMENT

ಅಷ್ಟೇ ಅಲ್ಲದೆ, ಗಾಂಧಿ ಕುರಿತು ಪುಸ್ತಕ, ಖಾದಿ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿದೆ. ನೀರಿನ ಬಾಟಲ್ ಅಥವಾ ತಿಂಡಿ ತಿನಿಸುಗಳನ್ನು ಒಯ್ಯುವಂತಿಲ್ಲ. ಸಾರ್ವಜನಿಕರು ಹೊರಗಿನಿಂದ ತಿನಿಸುಗಳನ್ನು ತಂದು ಕಸ ಕಡ್ಡಿ, ಪ್ಲಾಸ್ಟಿಕ್ ಎಸೆಯುವಂತಿಲ್ಲ.ಲಾಲ್‌ಬಾಗ್ ಆವರಣದಲ್ಲಿ ನೂರು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ಲಭ್ಯವಾಗಲು 5 ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ.

ಪಾರ್ಕಿಂಗ್‌ ವ್ಯವಸ್ಥೆ ಎಲ್ಲೆಲ್ಲಿ?

ಲಾಲ್‌ಬಾಗ್‌ನ ನಾಲ್ಕು ಪ್ರವೇಶ ದ್ವಾರಗಳಲ್ಲಿ ಸಾರ್ವಜನಿಕರ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಶಾಂತಿನಗರ ಬಸ್ ಡಿಪೊದ ಪಾರ್ಕಿಂಗ್‌ ಪ್ರದೇಶ, ಅಲ್-ಅಮೀನ್ ಕಾಲೇಜು ಮೈದಾನ ಹಾಗೂ ಜೆ.ಸಿ.ರಸ್ತೆಯ ಬಿಬಿಎಂಪಿ ಪಾರ್ಕಿಂಗ್‌ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಲಾಲ್‌ಬಾಗ್‌ನ ಜೋಡಿ ರಸ್ತೆಯ ಮೈಸೂರು ಉದ್ಯಾನ ಕಲಾ ಸಂಘದ ಬಳಿಯ 5 ಎಕರೆ ಪಾರ್ಕಿಂಗ್‌ ಪ್ರದೇಶದಲ್ಲಿ ಶಾಲಾ ವಾಹನಗಳು, ಆಂಬುಲೆನ್ಸ್‌ಗಳ ನಿಲುಗಡೆಗೆ ಮಾತ್ರ ಅವಕಾಶ ನೀಡಲಾಗಿದೆ.

**
ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ

ದೊಡ್ಡವರಿಗೆ ₹70

ಮಕ್ಕಳಿಗೆ ₹20

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.