ADVERTISEMENT

ನಿರ್ಗತಿಕರಿಗೆ ₹25 ಲಕ್ಷ ಮೌಲ್ಯದ ಆಹಾರ ಕಿಟ್‌ಗಳ ವಿತರಣೆ

ಸಂತ್ರಸ್ತರಿಗೆ ನೆರವು ನೀಡಿದ ಸ್ಥಳೀಯ ಮುಖಂಡರು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 21:56 IST
Last Updated 27 ಏಪ್ರಿಲ್ 2020, 21:56 IST
ಸಚಿವ ಎಸ್.ಟಿ. ಸೋಮಶೇಖರ್ ಸಂತ್ರಸ್ತರಿಗೆ ಆಹಾರ ಕಿಟ್‌ ವಿತರಿಸಿದರು. ಚೇತನ್, ವೇಣುಗೋಪಾಲ್, ರೂಪಾ ವೇಣುಗೋಪಾಲ್, ಜಿ.ಮಹೇಶ್, ಆರ್.ಪಿ.ಪ್ರಕಾಶ್, ಎಲ್ಲಪ್ಪ, ರಾಕೇಶ್‍ಗೌಡ, ವೆಂಕಟೇಶ್, ಹೇಮಂತ್‍ರಾಜ್ ಇದ್ದರು
ಸಚಿವ ಎಸ್.ಟಿ. ಸೋಮಶೇಖರ್ ಸಂತ್ರಸ್ತರಿಗೆ ಆಹಾರ ಕಿಟ್‌ ವಿತರಿಸಿದರು. ಚೇತನ್, ವೇಣುಗೋಪಾಲ್, ರೂಪಾ ವೇಣುಗೋಪಾಲ್, ಜಿ.ಮಹೇಶ್, ಆರ್.ಪಿ.ಪ್ರಕಾಶ್, ಎಲ್ಲಪ್ಪ, ರಾಕೇಶ್‍ಗೌಡ, ವೆಂಕಟೇಶ್, ಹೇಮಂತ್‍ರಾಜ್ ಇದ್ದರು   

ರಾಜರಾಜೇಶ್ವರಿನಗರ: ರಾಮೋಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಯುವ ಮುಖಂಡ ಚೇತನ್‌ ಹಾಗೂ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ವಿ. ವೇಣುಗೋಪಾಲ್ ಹಾಗೂ ಭೀಮನಕುಪ್ಪೆಯ ಜಿ. ಮಹೇಶ್‌ ಅವರು ವೈಯಕ್ತಿಕವಾಗಿ ₹25 ಲಕ್ಷ ಮೌಲ್ಯದ ಆಹಾರ ಕಿಟ್‌ ನೀಡಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್‌ ಈ ಕಿಟ್‌ಗಳನ್ನು ಸಂತ್ರಸ್ತರಿಗೆ ವಿತರಿಸಿದರು.

ಚೇತನ್ ಹಾಗೂ ವೇಣುಗೋಪಾಲ್‌ ಮಾತನಾಡಿ, ‘ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಯಾವ ಪ್ರದೇಶದಲ್ಲಿಯೂ ಕೂಲಿ ಕಾರ್ಮಿಕರು ಹಸಿವಿನಿಂದ ಬಳಲಬಾರದು ಎಂಬುದು ನಮ್ಮ ಉದ್ದೇಶ. ಹೀಗಾಗಿ, ಈ ನೆರವು ನೀಡುತ್ತಿದ್ದೇವೆ’ ಎಂದರು.

ADVERTISEMENT

ಗ್ರಾಮಪಂಚಾಯತಿ ಅಧ್ಯಕ್ಷೆ ರೂಪಾ ವೇಣುಗೋಪಾಲ್, ಉಪಾಧ್ಯಕ್ಷ ಜಿ.ಮಹೇಶ್, ರಾಜ್ಯ ಆರ್ಯ ಈಡಿಗರ ಸಂಘದ ನಿರ್ದೇಶಕ ಆರ್.ಪಿ.ಪ್ರಕಾಶ್, ಪಂಚಾಯತಿ ಸದಸ್ಯರಾದ ಎಲ್ಲಪ್ಪ, ರಾಕೇಶ್‍ಗೌಡ, ಮಾಜಿ ಅಧ್ಯಕ್ಷ ವೆಂಕಟೇಶ್, ಯುದ್ಧ ಭೂಮಿ ಹೋರಾಟ ಸೇನೆಯ ರಾಜ್ಯಘಟಕದ ಅಧ್ಯಕ್ಷ ಹೇಮಂತ್‍ರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.