ADVERTISEMENT

‘ಐಎಎಸ್‌ ಬಾಬಾ ಸಂಸ್ಥೆ’ಯ 14 ಅಭ್ಯರ್ಥಿಗಳು ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 20:01 IST
Last Updated 4 ಜೂನ್ 2022, 20:01 IST

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು ನಡೆಸಿದ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ರಾಜ್ಯದಿಂದ ಆಯ್ಕೆಯಾದ 26 ವಿದ್ಯಾರ್ಥಿಗಳ ಪೈಕಿ, 14 ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ‘ಐಎಎಸ್ ಬಾಬಾ ಸಂಸ್ಥೆ’ಯ ವಿದ್ಯಾರ್ಥಿಗಳು ಎಂದು ಸಂಸ್ಥೆಯ ಸಂಸ್ಥಾಪಕ ಎಸ್‌.ಮೋಹನ್‌ರಾಜ್‌ ತಿಳಿಸಿದ್ದಾರೆ.

ಆಯ್ಕೆಯಾದ ಅಂಜಲಿ ಶ್ರೋತ್ರಿಯ ಹಾಗೂ ರಾಜೇಶ್‌ ಪೊನ್ನಪ್ಪ ಅವರು ಗುರುಕುಲ ಕ್ಲಾಸ್‌ ರೂಂನ ಪೂರ್ಣಪ್ರಮಾಣದ ವಿದ್ಯಾರ್ಥಿಗಳಾಗಿದ್ದರು. ಸಂಸ್ಥೆಯ ಆನ್‌ಲೈನ್‌ ಹಾಗೂ ಆಫ್‌ಲೈನ್‌ನಲ್ಲಿ ತರಬೇತಿ ಪಡೆದು, ದೇಶದಾದ್ಯಂತ 160 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

‘ದೇಶದ ಯಾವುದೇ ಮೂಲೆಯಲ್ಲಿರುವ ಐಎಎಸ್‌ ಆಕಾಂಕ್ಷಿಗೆ ತರಬೇತಿ ನೀಡಿ ಮೊದಲ ರ್‍ಯಾಂಕ್‌ ದೊರೆಯುವಂತೆ ಮಾಡುವುದು ಸಂಸ್ಥೆಯ ಗುರಿಯಾಗಿದೆ. ಪೂರ್ವಭಾವಿ ಪರೀಕ್ಷೆ, ಮುಖ್ಯಪರೀಕ್ಷೆ ಹಾಗೂ ಸಂದರ್ಶನಕ್ಕೆ ಹೊಸ ರೀತಿಯಲ್ಲಿ ತರಬೇತಿ ನೀಡಲಾಗುವುದು. ಸಂಸ್ಥೆಯು ಆರಂಭವಾದ ಮೊದಲ ವರ್ಷವೇ 50 ಅಭ್ಯರ್ಥಿಗಳು ರ್‍ಯಾಂಕ್‌ ಗಳಿಸಿದ್ದರು. ಏಳು ವರ್ಷಗಳ ಅವಧಿಯಲ್ಲಿ, 1,650 ಅಭ್ಯರ್ಥಿಗಳು ರ್‍ಯಾಂಕ್‌ ಗಳಿಸಿದ್ದಾರೆ’ ಎಂದು ಮೋಹನ್‌ರಾಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಸಂಸ್ಥೆಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು:

ನಿಖಿಲ್‌ ಬಸವರಾಜ್‌ ಪಾಟೀಲ್‌ (132), ವಿನಯ್‌ ಕುಮಾರ್ ಗಡ್ಗೆ (1510, ಆರ್‌.ನಿತ್ಯ (207), ಮನೋಜ್‌ ರಾಮನಾಥ್‌ ಹೆಗ್ಡೆ (213), ಎಂ.ಪಿ.ರಾಜೇಶ್‌ ಪೊನ್ನಪ್ಪ (222), ಸಾಹಿತ್ಯಾ ಆಲದಕಟ್ಟೆ (250), ಕೆ.ಆರ್‌. ಕಲ್ಪಶ್ರೀ (291), ದೀಪಕ್‌ ರಾಮಚಂದ್ರ ಶೇಟ್‌ (311), ಪಿ.ದಿವ್ಯಾ (323), ಡಿ.ಎಚ್‌.ವಿನಯ್‌ಕುಮಾರ್‌ (352), ಕೆ.ಟಿ.ಮೇಘನಾ (425), ಪಿ.ಶ್ರವಣ್‌ಕುಮಾರ್‌ (521), ಕೆ.ಚೇತನ್‌ (532), ಬಿ.ಚೇತನ್‌ಕುಮಾರ್‌ (669).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.