ADVERTISEMENT

ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ₹ 1.15 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 2:18 IST
Last Updated 4 ಫೆಬ್ರುವರಿ 2020, 2:18 IST

ಬೆಂಗಳೂರು: ‘ಕ್ರೆಡಿಟ್‌ ಕಾರ್ಡ್‌ಗೆ ₹ 9,500 ಮೊತ್ತದ ಕಾಯಿನ್‌ ಡಿಪಾಸಿಟ್‌ ಮಾಡುತ್ತೇವೆ’ ಎಂದು ನಂಬಿಸಿ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರ ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿ ಪಡೆದಿದ್ದ ಅಪರಿಚಿತನೊಬ್ಬ, ತನ್ನ ಪೇಟಿಎಂ ಮತ್ತು ಮೊಬಿಕ್ವಿಕ್‌ ಆ್ಯಪ್‌ಗೆ ₹ 1,15,273 ವರ್ಗಾಯಿಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಹಣ ಕಳೆದುಕೊಂಡ ವಿಷ್ಣುವರ್ಧನ್‌ ರೆಡ್ಡಿ ಅವರು ಈ ಬಗ್ಗೆ ವರ್ತೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ಜ.28ರಂದು ಕರೆ ಮಾಡಿದ ವ್ಯಕ್ತಿಯೊಬ್ಬ ಕಾಯಿನ್‌ ಡಿಪಾಸಿಟ್‌ ಮಾಡುವ ಆಮಿಷ ಒಡ್ಡಿ ನನ್ನಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿ ಕೇಳಿದ್ದ. ನಾನು ನನ್ನ ಸಿಟಿ, ಐಸಿಐಸಿಐ, ಎಚ್‌ಡಿಎಫ್‌ಸಿ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕಿನ ಕ್ರೆಡಿಟ್‌ ಕಾರ್ಡ್‌ಗಳ ವಿವರ ನೀಡಿದ್ದೆ. ಆದಾಗಿ ಕೆಲವೇ ಸಮಯದಲ್ಲಿ ನನ್ನ ಈ ಕ್ರೆಡಿಟ್‌ ಕಾರ್ಡ್‌ಗಳಿಗೆ ಸಂಬಂಧಿತ ಖಾತೆಗಳಿಂದ ಹಣ ವರ್ಗಾವಣೆಯಾಗಿದೆ’ ಎಂದು ರೆಡ್ಡಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.