ADVERTISEMENT

ಆಮ್ಲಜನಕ ಸಾಧನ ಹೆಸರಿನಲ್ಲಿ ₹ 12.59 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 11 ಮೇ 2021, 21:45 IST
Last Updated 11 ಮೇ 2021, 21:45 IST

ಬೆಂಗಳೂರು: ಆಮ್ಲಜನಕ ಸಾಂದ್ರೀ ಕರಣ ಸಾಧನಗಳನ್ನು ಮಾರಾಟ ಮಾಡುವುದಾಗಿ ಹೇಳಿ ನಗರದ ಉದ್ಯಮಿಯೊಬ್ಬರಿಂದ ₹ 12.59 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಉತ್ತರ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಭೂಪಸಂದ್ರದ ನಿವಾಸಿಯಾಗಿರುವ ಉದ್ಯಮಿ ದೂರು ನೀಡಿದ್ದಾರೆ. ಸುರಭಿ ಎಂಟರ್‌ಪ್ರೈಸಸ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆಮ್ಲಜನಕ ಸಾಂದ್ರೀಕರಣ ಸಾಧನಗಳಿಗಾಗಿ ದೂರುದಾರ ಹುಡುಕಾಟ ನಡೆಸುತ್ತಿದ್ದರು. ಸುರಭಿ ಎಂಟರ್‌ಪ್ರೈಸಸ್ ಕಂಪನಿಯೊಂದರ ಜಾಹೀರಾತು ನೋಡಿ ಪ್ರತಿನಿಧಿಯನ್ನು ಸಂಪರ್ಕಿಸಿದ್ದರು. ಅಗತ್ಯವಿರುವಷ್ಟು ಸಾಧನ ನೀಡಲು ಒಪ್ಪಿದ್ದ ಪ್ರತಿನಿಧಿ, ಹಂತಹಂತವಾಗಿ ₹ 12.59 ಲಕ್ಷ ಪಡೆದಿದ್ದ’ ಎಂದು ಮೂಲಗಳು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.