ADVERTISEMENT

ಜ.1ರಿಂದ ಉಚಿತ ಆರೋಗ್ಯ ಶಿಬಿರ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 21:06 IST
Last Updated 29 ಡಿಸೆಂಬರ್ 2020, 21:06 IST

ಬೆಂಗಳೂರು: ನಗರದ ಸಪ್ತಗಿರಿ ಆಸ್ಪತ್ರೆಯು ಜನವರಿ 1ರಿಂದ 10ರವರೆಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಿದೆ.

ಆಸ್ಪತ್ರೆಯ ಮುಖ್ಯಸ್ಥ ದಯಾನಂದ ಹಾಗೂ ನಿರ್ದೇಶಕ ಮನೋಜ್ ಅವರು ಶಿಬಿರದ ಅಂಗವಾಗಿ ಆರೋಗ್ಯ ಸೇವಾ ಲಾಂಛನವನ್ನು ಬಿಡುಗಡೆ ಮಾಡಿದರು.

ಶಿಬಿರದಲ್ಲಿ ಪ್ರವೇಶ ಶುಲ್ಕ, ರ‍್ಯಾಪಿಡ್ ಆ್ಯಂಟಿಜನ್ ಪರೀಕ್ಷೆ, ವೈದ್ಯಕೀಯ ಚಿಕಿತ್ಸೆ, ವಾರ್ಡ್ ಶುಲ್ಕ, ಓಟಿ ಶುಲ್ಕ, ಶಸ್ತ್ರಚಿಕಿತ್ಸಾ ಶುಲ್ಕ, ವೈದ್ಯರು ಮತ್ತು ನರ್ಸ್‌ಗಳ ಸೇವಾ ಶುಲ್ಕ, ಔಷಧ ವೆಚ್ಚ, ಮೂಲ ಪ್ರಯೋಗಾಲಯ ತನಿಖಾ ವೆಚ್ಚ, ವಿಕಿರಣಶಾಸ್ತ್ರ ಮತ್ತು ಸ್ಕ್ರೀನಿಂಗ್‌ಗೆ (ಎಕ್ಸ್‌ರೇ, ಸಿಟಿ, ಎಂಆರ್‌ಐ) ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಉಚಿತ ಊಟದ ವ್ಯವಸ್ಥೆ ಇರುತ್ತದೆ.

ADVERTISEMENT

ಕಾರ್ಡಿಯಾಲಜಿ, ಮೆಡಿಕಲ್ ಗ್ಯಾಸ್ಟ್ರೊ ಎಂಟ್ರೋಲಜಿ, ರೇಡಿಯಾಲಜಿ, ಮೂತ್ರಶಾಸ್ತ್ರ ಮತ್ತು ನೆಫ್ರಾಲಜಿಗೆ ಸಂಬಂಧಪಟ್ಟ ಸೇವೆಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಸ್ಥಳ: ಸಪ್ತಗಿರಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ, ಚಿಕ್ಕಸಂದ್ರ, ಎಂಟನೇ ಮೈಲಿ ಹತ್ತಿರ, ಹೆಸರಘಟ್ಟ ಮುಖ್ಯರಸ್ತೆ.

ಸಂಪರ್ಕ: 9901653964, 8884439163

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.