ADVERTISEMENT

ಉಚಿತ ಯೋಗಸಾನ ತರಬೇತಿ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 19:31 IST
Last Updated 10 ಜನವರಿ 2023, 19:31 IST

ಬೆಂಗಳೂರು: ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ 45 ದಿನಗಳ ಉಚಿತ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ ತರಗತಿಳನ್ನು ಹಮ್ಮಿಕೊಳ್ಳಲಾಗಿದೆ.

ಜ. 12ರಂದು ಬೆಂಗಳೂರಿನ ವಿವಿಧ ಶಾಖೆಗಳಲ್ಲಿ ತರಗತಿಗಳು ಪ್ರಾರಂಭವಾಗಲಿವೆ.

ಕೆಂಗೇರಿಯ ರಾಧಾಕೃಷ್ಣ ಶಾಲೆ, ಚುಂಚನಕುಪ್ಪೆಯ ಆರ್‌ಪಿಎಸ್‌ ಚಿಲ್ಡ್ರನ್‌ ಸ್ಕೂಲ್, ಭಾರತನಗರದ ಪಂಚಮುಖಿ ದೇವಸ್ಥಾನ, ಹೆಗ್ಗನಹಳ್ಳಿ ಕರೀಂಸಾಬ್‌ ಲೇಔಟ್‌ನ ದೀಪಶ್ರೀ ಪ್ರೌಢಶಾಲೆ, ಚನ್ನಪ್ಪ ಲೇಔಟ್‌ನ ಅಮ್ಮ ಭಗವಾನ ಧ್ಯಾನಮಂದಿರ, 4ನೇ ಅಡ್ಡರಸ್ತೆಯ ಮಹದೇಶ್ವರ ನಗರದ ಅಲ್‌ಫ್ರೆಡ್‌ ನೋಬಲ್‌ ಸ್ಕೂಲ್, ಶಿವನಗರದ ಸಿದ್ಧಗಂಗಾ ಶಾಲೆ, ವಿಜಯನಗರದ ಸರ್ಕಾರಿ ಶಾಲೆ ಹೊಸಳ್ಳಿ, ನಂದಿನಿ ಬಡಾವಣೆಯಲ್ಲಿರುವ ಬಿಬಿಎಂಪಿಯ ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್‌ ಪಕ್ಕ, ರಾಜಾಜಿನಗರದ 5ನೇ ಬ್ಲಾಕ್‌ನ ಆರ್‌.ಪಿ.ಇ ಶಾಲೆ, ರಾಜಾಜಿನಗರದ ನವರಂಗದ ಅಟಲ್‌ ಬಿಹಾರಿ ವಾಜಪೇಯಿ ಶಾಖೆ, ರಾಜಾಜಿನಗರದ ದೇವಯ್ಯ ಪಾರ್ಕ್‌, ಮಲ್ಲೇಶ್ವರದ ಗಂಗಮ್ಮ ದೇವಿ ದೇವಸ್ಥಾನ, ರಾಜಾಜಿನಗರದ 2ನೇ ಹಂತದ ಸೇವಾ ಸಮಾಜ ಶಾಖೆಗಳಲ್ಲಿ ತರಬೇತಿಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಮಾಹಿತಿಗಾಗಿ 9743060580/9035230633ಗೆ ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.